ಮೈಸೂರು: ಟಿಕೆಟ್ ಕನ್ಫರ್ಮ್ ಮಾಡಿಕೊಂಡು ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ರಣತಂತ್ರ ರೂಪಿಸಲು ವರುಣಾ ಕ್ಷೇತ್ರಕ್ಕೆ ಇಂದಿನಿಂದ ಧುಮುಕಲಿದ್ದಾರೆ.
ಸೋಮವಾರದಿಂದ ಸಂಪೂರ್ಣ ಪ್ರಚಾರಕ್ಕೆ ಇಳಿಯಲಿದ್ದು, ಇಂದು ವರುಣಾ ಕ್ಷೇತ್ರದಲ್ಲಿ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಮೈಸೂರಿಗೆ ಆಗಮಿಸಿದ್ದು, ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಯಾಕೆ, ಅವರ ಅಪ್ಪ ಯಡಿಯೂರಪ್ಪ ಬಂದು ನಿಲ್ಲಲಿ: ಸಿಎಂ ಸಿದ್ದರಾಮಯ್ಯ
ನನಗೆ ವೈಯಕ್ತಿಕವಾಗಿ ವರುಣಾ ಕ್ಷೇತ್ರಕ್ಕೆ ಬರಬೇಕು ಎಂದು ಅನಿಸಿರಲಿಲ್ಲ. ಕ್ಷೇತ್ರದ ಜನರು ಒತ್ತಾಯ ಮಾಡಿದ್ದಕ್ಕೆ ಬಂದಿದ್ದೇನೆ. ಪಕ್ಷ ಸಂಘಟನೆ ಮಾಡಬೇಕಾಗಿರುವುದರಿಂದ ವರುಣಾ ಕ್ಷೇತ್ರದ ಶಕ್ತಿ ಕೇಂದ್ರದಲ್ಲಿ ನಾಳೆ ಸಭೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮೈಸೂರು ಭಾಗದ ಇತರ ಕ್ಷೇತದಲ್ಲಿ ಪ್ರಚಾರ ಮಾಡುತ್ತೇನೆ. ಆದರೆ ಮೊದಲು ವರುಣಾ ಕ್ಷೇತ್ರಕ್ಕೆ ಆದ್ಯತೆ ನೀಡುತ್ತೇವೆ ಅಂತ ವಿಜಯೇಂದ್ರ ತಿಳಿಸಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ಬಿ.ವೈ ವಿಜೇಂದ್ರ ಟಿಕೆಟ್ ನೀಡುವಂತೆ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ವಿಜೇಂದ್ರ ಭೇಟಿ ಕುತೂಹಲ ಕೆರಳಿಸಿದೆ.