– ಮಗನ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಅಧಿಕಾರ ಹಂಚಿಕೆ, ಸಂಪುಟ ಸರ್ಜರಿ ಕುದಿಯಲ್ಲಿ ಬೇಯುತ್ತಿರುವ ರಾಜ್ಯ ಕಾಂಗ್ರೆಸ್‌ನಲ್ಲಿ ಉತ್ತರಾಧಿಕಾರಿ ಸಮರ ತಾರಕಕ್ಕೇರಿದೆ. ಸಿದ್ದರಾಮಯ್ಯಗೆ (Siddaramaiah) ಸತೀಶ್ ಜಾರಕಿಹೊಳಿ ಸಮರ್ಥ ಉತ್ತರಾಧಿಕಾರಿ ಎಂಬ ಸಂದೇಶ ರವಾನಿಸಿ ಯತೀಂದ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ. ಯತೀಂದ್ರ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸುತ್ತಿದ್ದಂತೆಯೇ ಹೈಕಮಾಂಡ್‌ಗೆ ಕೆಪಿಸಿಸಿ ರಿಪೋರ್ಟ್ ಸಲ್ಲಿಸಿದೆ.
ಈಗ ಯತೀಂದ್ರ (Yathindra Siddaramaiah) ಮೇಲೆ ಹೈಕಮಾಂಡ್ ಶಿಸ್ತುಕ್ರಮದ ತೂಗುಗತ್ತಿ ಇದೆ. ಯತೀಂದ್ರ ಮಾತಿಗೆ ಕಡಿವಾಣಕ್ಕೆ ಪಕ್ಷದ ಕೆಲ ಶಾಸಕರು ಆಗ್ರಹಿಸಿದ್ದಾರೆ. ಡಿಸಿಎಂ ಡಿಕೆಶಿ ಕೂಡ, ‘ಯಾರ ಹತ್ತಿರ.. ಏನು ಮಾತನಾಡಬೇಕೋ.. ಅಲ್ಲಿ ಮಾತನಾಡುತ್ತೇನೆ. ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ’ ಅಂತ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಆಂತರಿಕ ಸಂಘರ್ಷ, ಅಧಿಕಾರ ಹಸ್ತಾಂತರ ಚರ್ಚೆ ಮಧ್ಯೆ ರಾಜ್ಯಕ್ಕೆ ಬರಲಿದ್ದಾರೆ ರಾಹುಲ್ ಗಾಂಧಿ
ಈ ಬೆನ್ನಲ್ಲೇ ಸಿಎಂ ಪ್ರತಿಕ್ರಿಯಿಸಿದ್ದು, ಮಗನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದೇನೆ ಅಂತ ಹೇಳಿದ್ದಾನೆ. ಇದನ್ನು ತಿರುಚಿ ಬರೆಯಲಾಗಿದೆ ಅಂತ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ.
ಯತೀಂದ್ರ ಹೇಳಿಕೆಗೆ ಸಚಿವ ಮಹದೇವಪ್ಪ, ಮಾಜಿ ಸಚಿವ ರಾಜಣ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಯಾರೋ ತೆವಲಿಗೆ, ತೀಟೆಗೆ ಮಾತನಾಡಿದ್ದನ್ನ ಗಣನೆಗೆ ತೆಗೆದುಳ್ಳೊಕ್ಕಾಗಲ್ಲ ಅಂತ ಮದ್ದೂರು ಶಾಸಕ ಉದಯ್ ಮಾತನಾಡಿದ್ದಾರೆ. ಇದನ್ನೂ ಓದಿ: ಒಂದು ಮತ ಕಳವಿಗೆ 80 ರೂ. ʻಕೂಲಿʼ – ಬಿಜೆಪಿ ಮೇಲೆ ಆರೋಪ ಹೊರಿಸಿದ ಈಶ್ವರ್ ಖಂಡ್ರೆ


