ಹಾಸನ: ಯಾವುದೇ ಆಧಾರವಿಲ್ಲದೇ ಅಧಿಕಾರಿಗಳ ಮೇಲೆ ಆರೋಪ ಮಾಡಿ ಅವಮಾನ ಮಾಡಿದ್ದರೆ ಸ್ನೇಹಮಯಿ ಕೃಷ್ಣ (Snehamayi Krishna) ವಿರುದ್ಧ ಖಂಡಿತವಾಗಿಯೂ ಕ್ರಮಕೈಗೊಳ್ಳಬೇಕು ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದರು.
ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಸ್ನೇಹಮಯಿ ಕೃಷ್ಣ ಬಂಧವಾಗಿದೆಯಾ? ಹೌದಾ, ನನಗೆ ಈ ವಿಷಯ ತಿಳಿದಿಲ್ಲ. ನೀವು ಹೇಳಿದಾಗಲೇ ಗೊತ್ತಾಗುತ್ತಿದೆ. ಯಾವ ಕಾರಣಕ್ಕೆ ಬಂಧಿಸಿದ್ದಾರೆ ಎಂಬುದೂ ತಿಳಿದಿಲ್ಲ ಎಂದು ಅಲ್ಲಿಯೇ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಮುಡಾ ಪ್ರಕರಣದ ರುವಾರಿ ಸ್ನೇಹಮಯಿ ಕೃಷ್ಣ ಅರೆಸ್ಟ್
ಮಾಹಿತಿ ಪಡೆದ ಬಳಿಕ ಪ್ರತಿಕ್ರಿಯಸಿದ ಅವರು, ಆಧಾರಹಿತ ಆರೋಪಗಳನ್ನು ಸುಮ್ಮನೆ ಮಾಡಬಹುದೇ? ರಾಜಕಾರಣಿಗಳು ಜನರಿಗೆ ಅಕೌಂಟಬಲ್ ಆಗಿರಬೇಕು. ನಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಿದರೂ ನಾವು ಸಹಿಸುತ್ತೇವೆ. ಹೋರಾಟ ಮಾಡುತ್ತೇವೆ. ಅಧಿಕಾರಿಗಳ ಮೇಲೆ ಸುಮ್ಮನೆ ತೇಜೋವಧೆ ಮಾಡುವುದು ಸರಿಯಲ್ಲ. ಯಾವುದೇ ಆಧಾರವಿಲ್ಲದೆ ಒಬ್ಬ ಅಧಿಕಾರಿಯ ತೇಜೋವಧೆ ಮಾಡಿದರೆ ಕ್ರಮಕೈಗೊಳ್ಳಬೇಕು ಎಂದರು.
ಮುಡಾ ಸಂಬಂಧಿಸಿದ ಎಲ್ಲಾ ಆರೋಪಗಳನ್ನು ತನಿಖೆಗೆ ಒಪ್ಪಿಸಿದ್ದೇವೆ. ಕೆಂಪಣ್ಣ ಆಯೋಗವೂ ಇದೆ. ತನಿಖೆಯಲ್ಲಿ ಅವ್ಯವಹಾರ ಆಗಿರೋದು ಗೊತ್ತಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ತಾರೆ ಎಂದರು. ಇದನ್ನೂ ಓದಿ: ಸ್ನೇಹಮಯಿ ಕೃಷ್ಣ ಬಂಧನ ದುರಾಡಳಿತಕ್ಕೆ ಸಾಕ್ಷಿ – ಆರ್. ಅಶೋಕ್ ಕಿಡಿ

