ಮೈಸೂರು: ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವುದಕ್ಕೆ ಪೌರತ್ವ ಕಾಯ್ದೆ ತಂದಿದ್ದಾರೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈಗ ಕೆಲವೆಡೆ ಚುನಾವಣೆ ಬರ. ಇದರಲ್ಲಿ ಗೆಲ್ಲುವುದಕ್ಕೆ ಬಿಜೆಪಿ ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಿದೆ. ಹಿಂದೂ-ಮುಸ್ಲಿಂ ಎಂದು ವಿಂಗಡಿಸಿ ರಾಜಕಾರಣ ಮಾಡುತ್ತಿದೆ. ಇದು ಬಿಜೆಪಿಯ ಅತ್ಯಂತ ಕ್ರೂರವಾದ ನಿರ್ಧಾರ ಎಂದು ಟೀಕಿಸಿದರು. ಇದನ್ನೂ ಓದಿ: ಕಾಯ್ದೆ ಜಾರಿಯಾದ್ರೆ ಕರ್ನಾಟಕ ಹೊತ್ತಿ ಉರಿಯುತ್ತದೆ: ಖಾದರ್ ವಿವಾದಾತ್ಮಕ ಹೇಳಿಕೆ
Advertisement
Advertisement
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಮಂಗಳೂರು ಪ್ರವೇಶಿಸಿದಂತೆ ಪೊಲೀಸರು ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ, 144 ಸೆಕ್ಷನ್ ಜಾರಿಯಾದರೆ ಗುಂಪು ಸೇರಬಾರದು ಅಷ್ಟೇ. ಅದನ್ನ ಬಿಟ್ಟು ನೋಟಿಸ್ ನೀಡುವುದು, ನಗರ ಪ್ರವೇಶಿಸದಂತೆ ತಡೆ ಹಿಡಿಯೋದು ಸರಿಯಲ್ಲ. ಇದು ಬಿಜೆಪಿಯ ಡಿಕ್ಟೇಟರ್ ರೂಲ್ ತೋರಿಸುತ್ತೆ ಎಂದರು.
Advertisement
ಇದೇ ವೇಳೆ ಅವರು ಬೆಂಕಿ ಹಚ್ಚುತ್ತೇವೆ ಎಂದು ಹೇಳಿಲ್ಲ. ಬೆಂಕಿ ಹಚ್ಚುವಂತಹ ಕೆಲಸ ಮಾಡಬೇಡಿ ಎಂದಿದ್ದಾರೆ ಅಷ್ಟೇ. ಈ ಹೇಳಿಕೆಯನ್ನ ತಿರುಚಿ ತಮಗಿಷ್ಟ ಬಂದ ಹಾಗೆ ನಡೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Advertisement