ಹರಿಯಾಣ: ಬರೋಬ್ಬರಿ 12 ಸಿಕ್ಸರ್, 46 ಬೌಂಡರಿಗಳೊಂದಿಗೆ ಅಜೇಯ 426 ರನ್ (463 ಎಸೆತ) ಸಿಡಿಸುವ ಮೂಲಕ ಹರಿಯಾಣದ ಬ್ಯಾಟರ್ ಯಶ್ವರ್ಧನ್ ದಲಾಲ್ (Yashvardhan Dalal) ಇನ್ನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ.
Advertisement
ಶುಕ್ರವಾರದಿಂದ ಆರಂಭಗೊಂಡಿರುವ ನಡೆದ ಕರ್ನಲ್ ಸಿಕೆ ನಾಯುಡು ಟ್ರೋಫಿ (CK Nayudu Trophy) ಅಂಗವಾಗಿ ಹರಿಯಾಣದ ಸುಲ್ತಾನ್ ಪುರದಲ್ಲಿರುವ ಗುರುಗ್ರಾಮ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಹರಿಯಾಣ ಹಾಗೂ ಮುಂಬೈ ತಂಡಗಳ ನಡುವಿನ ಪಂದ್ಯದಲ್ಲಿ ಆರಂಭಿಕ ಯಶ್ವರ್ಧನ್ ದಲಾಲ್ ಆರಂಭದಲ್ಲೇ ಭರ್ಜರಿ ಕಮಾಲ್ ಮಾಡಿದ್ದಾರೆ. ಮುಂಬೈ (Mumbai) ವಿರುದ್ಧ 92.03 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಯಶ್ವರ್ಧನ್ ದಲಾಲ್ 426 ರನ್ ಚಚ್ಚಿ ಕ್ರೀಸ್‌ನಲ್ಲಿ ಅಜೇಯರಾಗುಳಿದರು. ಇದರೊಂದಿಗೆ 2ನೇ ದಿನದ ಅಂತ್ಯಕ್ಕೆ ಹರಿಯಾಣ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 732 ರನ್ ಬಾರಿಸಿತು. ಇದನ್ನೂ ಓದಿ: ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್ – 22 ವರ್ಷಗಳ ಬಳಿಕ ಸರಣಿ ಗೆಲುವು
Advertisement
Advertisement
ದಲಾಲ್ ಈ ಇನ್ನಿಂಗ್ಸ್‌ನಲ್ಲಿ ಅಜೇಯ 426 ರನ್ ಗಳಿಸುವ ಮೂಲಕ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ದಾಖಲೆ ಬರೆದರು. ಇದರೊಂದಿಗೆ ಕಳೆದ ವರ್ಷ ಇದೇ ಟೂರ್ನಿಯಲ್ಲಿ ಒಂದೇ ಇನಿಂಗ್ಸ್ ನಲ್ಲಿ 312 ರನ್ ಸಿಡಿಸಿ ಅತಿ ದೊಡ್ಡ ವೈಯಕ್ತಿಕ ಮೊತ್ತ ದಾಖಲೆ ಬರೆದಿದ್ದ ಉತ್ತರ ಪ್ರದೇಶ ಬ್ಯಾಟ್ಸ್‌ಮನ್ ಸಮೀರ್ ರಿಝ್ವಿಯವರ ದಾಖಲೆಯನ್ನು ನುಚ್ಚುನೂರು ಮಾಡಿದರು. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್
Advertisement
ಮೊದಲು ಟಾಸ್ ಗೆದ್ದಿದ್ದ ಮುಂಬೈ ತಂಡ, ಫೀಲ್ಡಿಂಗ್ ಆಯ್ದುಕೊಂಡೂ ಭೈಆಟಿಂಗ್ ಮಾಡುವ ಅವಕಾಶವನ್ನು ಹರಿಯಾಣಕ್ಕೆ ಬಿಟ್ಟುಕೊಟ್ಟಿತು. ಫೀಲ್ಡಿಂಗ್ ಆಯುಕ್ತಕೊಂಡ ಮುಂಬೈ ಎದುರಾಳಿ ಬ್ಯಾಟರ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸದಲ್ಲಿತ್ತು. ಆದ್ರೆ ಹರಿಯಾಣ ಬ್ಯಾಟರ್‌ಗಳ ಆರ್ಭಟಕ್ಕೆ ಲೆಕ್ಕಾಚಾರವೆಲ್ಲಾ ಉಲ್ಟಾ ಆಯಿತು. ಆರಂಭಿಕರಾದ ದಲಾಲ್ ಮತ್ತು ಅರ್ಶ್ ರಂಗಾ ಅವರ ಜೊತೆಯಾಟ ಮುಂಬೈ ಬೌಲರ್‌ಗಳನ್ನು ಕಂಗಾಲು ಮಾಡಿತ್ತು. ಇವರಿಬ್ಬರ ಜುಗಲ್ ಬಂದಿಯಲ್ಲಿ ಆಟ ಮೊದಲ ವಿಕೆಟ್‌ಗೆ 410 ರನ್‌ಗಳನ್ನು ಕಲೆಹಾಕಿತ್ತು.
ರಂಗಾ ಅವರ ವಿಕೆಟ್ ಪತನವಾದ ನಂತರ ಇನ್ನುಳಿದ ಬ್ಯಾಟ್ಸ್ ಮನ್ ಗಳು ಹಾಗೆ ಬಂದು ಹೀಗೆ ಹೋದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರು ಆಡಿದ ದಲಾಲ್ ಶನಿವಾರದ ಆಟದಲ್ಲಿ ಅಕ್ಷರಶಃ ಅಬ್ಬರಿಸಿದರು. ಅವರ ಭರ್ಜರಿ ಅಜೇಯ ಆಟದಿಂದಾಗಿ ಹರ್ಯಾಣ ತಂಡ, ಪಂದ್ಯದ 2ನೇ ದಿನವಾದ ಶನಿವಾರದ ಅಂತ್ಯಕ್ಕೆ 8 ವಿಕೆಟ್ ಗೆ 732 ರನ್ ಗಳನ್ನು ಪೇರಿಸಿದೆ.ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ
ಸಂಕ್ಷಿಪ್ತ ಸ್ಕೋರ್:
ಹರ್ಯಾಣ ಮೊದಲ ಇನಿಂಗ್ಸ್ 732/8, ಯಶ್ ವರ್ದನ್ ದಲಾಲ್ ಅಜೇಯ 426 ರನ್ (463 ಎಸೆತ, 58 ಬೌಂಡರಿ, 12 ಸಿಕ್ಸರ್), ಅರ್ಶ್ ರಂಗಾ 151 ರನ್ (311 ಎಸೆತ, 18 ಬೌಂಡರಿ, 1 ಸಿಕ್ಸರ್), ಸರ್ವೇಶ್ ರೋಹಿಲಾ 48 ರನ್, ಪರ್ಥ್ ನಗಿಲ್ 25 ರನ್, ಪರ್ಥ್ ವಾಟ್ಸ್ 24 ರನ್.