ಯಶ್ ನಟಿಸಿರುವ `ಟಾಕ್ಸಿಕ್’ ಚಿತ್ರದ ಐದನೇ ನಾಯಕಿ ರುಕ್ಮಿಣಿ ವಸಂತ್ (Rukmini Vasanth) ಲುಕ್ ಅನಾವರಣವಾಗಿದೆ. ಗ್ಲ್ಯಾಮರ್ ಲುಕ್‌ನಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದು ಪಾತ್ರದ ಹೆಸರು ಮೆಲ್ಲಿಸಾ ಅನ್ನೋದಾಗಿ ಚಿತ್ರತಂಡ ಘೋಷಿಸಿದೆ. ಈ ಕುರಿತು ಅಧಿಕೃತ ಪೋಸ್ಟರ್ ಚಿತ್ರತಂಡ ರಿಲೀಸ್ ಮಾಡಿದೆ.
`ಟಾಕ್ಸಿಕ್ ಚಿತ್ರದಲ್ಲಿ ಒಟ್ಟೂ ಐವರು ಪ್ರಖ್ಯಾತ ನಟಿಯರು ನಟಿಸಿದ್ದಾರೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ಬಹುಭಾಷಾ ನಟಿ ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ನಟಿಸಿದ್ದಾರೆ.
Introducing Rukmini Vasanth @rukminitweets as MELLISA in – A Toxic Fairy Tale For Grown-Ups#TOXIC #TOXICTheMovie #Nayanthara @humasqureshi @advani_kiara #TaraSutaria #GeetuMohandas @RaviBasrur #RajeevRavi #UjwalKulkarni #TPAbid #MohanBKere #SandeepSadashiva… pic.twitter.com/jv83SVLzYu
— Yash (@TheNameIsYash) January 6, 2026
ಕಳೆದೊಂದು ತಿಂಗಳಿಂದ ಯಶ್ & ಟೀಮ್ ತಮ್ಮ ಚಿತ್ರದ ನಟಿಯರ ಪರಿಚಯ ಮಾಡಿಕೊಡುತ್ತಿದ್ದರು. ಇದೀಗ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಐದನೇ ನಾಯಕಿಯ ರುಕ್ಮಿಣಿ ವಸಂತ್ ಇಂಟ್ರುಡಕ್ಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಒಟ್ಟೂ ಐವರು ನಾಯಕಿಯ ಅನಾವರಣ ಆಗಿದೆ.
ಇದೇ ಜನವರಿ 8ಕ್ಕೆ ಯಶ್ (Yash) ಹುಟ್ಟುಹಬ್ಬವಿದ್ದು ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಇದುವರೆಗೂ ಚಿತ್ರತಂಡ ಅಧಿಕೃತ ಘೋಷಣೆ ಮಾಡಿಲ್ಲ. ಟೀಸರ್‌ನಲ್ಲಿ ಐವರು ನಾಯಕಿಯರ ಲುಕ್ ಕೂಡ ರಿವೀಲ್ ಆಗುವ ಸಾಧ್ಯತೆಯೂ ಇದೆ.

