CinemaKarnatakaLatestMain PostSandalwoodTV Shows

ಕಾಫಿ ವಿತ್ ಕರಣ್ ಶೋಗೆ ಹೋಗದಂತೆ ತಡೆಯುತ್ತಿದ್ದಾರೆ ಯಶ್ ಅಭಿಮಾನಿಗಳು

Advertisements

ಬಿಟೌನ್ ನಲ್ಲಿ ಇದೀಗ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ವಿಷಯವೇ ಹಾಟ್ ಟಾಪಿಕ್. ವಿವಾದ, ಡೇಟಿಂಗ್, ಸೆಕ್ಸ್, ಖಾಸಗಿ ಸಂಗತಿಗಳನ್ನೇ ಬಂಡವಾಳ ಮಾಡಿಕೊಂಡು ಈ ಕಾರ್ಯಕ್ರಮವನ್ನು ನೆಡಿಸಿಕೊಡುತ್ತಿದ್ದಾರಂತೆ ಕರಣ್. ಹಾಗಾಗಿ ಇಂತಹ ಕಾರ್ಯಕ್ರಮಕ್ಕೆ ಯಶ್ ಹೋಗಬಾರದು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಯಶ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಕಾಮೆಂಟ್ ಮಾಡಿದ್ದು, ಯಶ್ ಅವರಿಗೆ ಒಂದು ಘನತೆಯಿದೆ. ಅಲ್ಲದೇ, ಅವರು ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳು ಯಾರಿಗೂ ಸ್ಫೂರ್ತಿ ತುಂಬುವಂಥದ್ದು ಆಗಿರುವುದಿಲ್ಲ. ನಿಮ್ಮಿಂದ ಬೇರೆ ರೀತಿಯ ಉತ್ತರಗಳನ್ನೂ ನಾವು ಬಯಸುವುದಿಲ್ಲ. ಹೀಗಾಗಿ ಆ ಶೋಗೆ ಹೋಗಬೇಡಿ ಎಂದು ಹಲವಾರು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನ ನಟ ಜಿ.ಎಂ ಕುಮಾರ್ ಆಸ್ಪತ್ರೆಗೆ ದಾಖಲು

ಪತ್ನಿ ರಾಧಿಕಾ ಜೊತೆ ವಿದೇಶ ಪ್ರವಾಸದಲ್ಲಿರುವ ಯಶ್, ಇದನ್ನು ಎಷ್ಟು ಗಂಭೀರವಾಗಿ ತಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಅಭಿಮಾನಿಗಳಂತೂ ಇಂಥದ್ದೊಂದು ಒತ್ತಡವನ್ನಂತೂ ಹೇರುತ್ತಿದ್ದಾರೆ. ಹಾಗಾಗಿ ಯಶ್ ನಡೆ ಏನಿರಬಹುದು ಎನ್ನುವ ಸಹಜ ಕುತೂಹಲವಂತೂ ಮೂಡಿದೆ. ಈಗಾಗಲೇ ಈ ಶೋನಲ್ಲಿ ಭಾಗಿ ಆಗುವಂತೆ ಯಶ್ ಗೂ ಕೂಡ ಕರೆ ಬಂದಿದೆ ಎನ್ನಲಾಗುತ್ತಿದೆ. ಆದರೆ, ಅವರು ಇನ್ನೂ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎನ್ನುತ್ತಾರೆ ಆಪ್ತರು.

Live Tv

Leave a Reply

Your email address will not be published.

Back to top button