ಬೆಂಗಳೂರು: ಚಂದನವನದ ಸೂಪರ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.
A sneak peek into our cover stories
Inside Forbes India’s first-ever South celebrity special edition. Subscribe to get early access to our #SouthCelebritySpecial
By @divyajshekhar https://t.co/1Bs5IU30os
— Forbes India (@forbes_india) October 11, 2021
Advertisement
ಕೆಜಿಎಫ್ ಭಾಗ 1 ಚಿತ್ರ ತೆರೆಕಂಡ ನಂತರ ರಾಕಿಂಗ್ ಸ್ಟಾರ್ ಯಶ್ ಹೆಸರು ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡಿತ್ತು. ಈಗ ಇವರ ಹೆಸರು ಕನ್ನಡಸಿನಿಮಾರಂಗದಲ್ಲಿ ಮಾತ್ರವಲ್ಲ, ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿಯೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಯಶ್ ದಕ್ಷಿಣಭಾರತದ ಮೇರು ನಟನಾಗಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ ನಲ್ಲಿ ಸೆಲೆಬ್ರಿಟಿ ಸ್ಪೆಷಲ್ ಎಡಿಷನ್ನ ರಿಲೀಸ್ ಆಗಿದ್ದು, ಈ ಮುಖಪುಟದಲ್ಲಿ ಯಶ್ ಫೋಟೋ ಕೂಡ ರಾರಾಜಿಸಿದೆ. ಯಶ್ ಅಭಿಮಾನಿಗಳು ಈ ಎಡಿಷನ್ ನೋಡಿ ಫುಲ್ ಖುಷ್ ಆಗಿದ್ದಾರೆ. ಈ ಹಿನ್ನೆಲೆ ಇವರ ಅಭಿಮಾನಿಗಳು ಟ್ವಿಟರ್ ನಲ್ಲಿ #YashBOSS ಎಂದು ಹಾಕಿದ್ದು, ಈಗ ಅದು ಟ್ರೆಂಡ್ ಆಗಿದೆ. ಇದನ್ನೂ ಓದಿ: ತಿರುಗುವ ಮನೆ ನಿರ್ಮಿಸಿ ಪತ್ನಿಗೆ ಗಿಫ್ಟ್ ಕೊಟ್ಟ 72ರ ಪತಿ
Advertisement
Another One ????
Smart Look From @TheNameIsYash BOSS ❤️????#KGFChapter2 #YashBOSS pic.twitter.com/1DGidUCXu5
— Telugu Yash Fans Club ™ కె జి ఎఫ్ (@YashTeluguFc) October 11, 2021
Advertisement
ಫೋರ್ಬ್ಸ್ ಮ್ಯಾಗಜಿನ್ ಇದೇ ಮೊದಲಬಾರಿಗೆ ಫೋರ್ಬ್ಸ್ ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನೇ ಇಟ್ಟುಕೊಂಡು ವಿಶೇಷ ಎಡಿಷನ್ ರಿಲೀಸ್ ಮಾಡಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸೆಲೆಬ್ರಿಟಿಗಳನ್ನು ಈ ಎಡಿಷನ್ ನಲ್ಲಿ ಸೇರಿಸಲಾಗಿದೆ. ಕನ್ನಡದಿಂದ ಯಶ್, ತಮಿಳಿನಿಂದ ನಯನತಾರಾ, ಮಲಯಾಳಂನಿಂದ ದುಲ್ಖರ್ ಸಲ್ಮಾನ್ ಫೋಟೋ ಮ್ಯಾಗಜಿನ್ ಮುಖಪುಟದಲ್ಲಿದೆ.
Advertisement
ಈ ಕುರಿತು ಫೋರ್ಬ್ಸ್ ಟ್ವಿಟ್ಟರ್ ನಲ್ಲಿ ವೀಡಿಯೋ ಹಂಚಿಕೊಂಡಿದ್ದು, ಯಶ್ ಬ್ಲಾಕ್ ಕೋಟ್ ಮತ್ತು ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಅದರಲ್ಲಿಯೂ ಇವರ ಹೇರ್ಸ್ಟೈಲ್ ಮಾತ್ರ ಸಖತ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಫೋರ್ಬ್ಸ್ ನಲ್ಲಿ ಯಶ್ ಫೊಟೋ ನೋಡುತ್ತಿದ್ದಂತೆ ಅವರ ಅಭಿಮಾನಿಗಳು ಕೆಜಿಎಫ್ ಚಾಪ್ಟರ್ 2 ಹಾಗೂ #YashBOSS ಹ್ಯಾಶ್ಟ್ಯಾಗ್ ಹಾಕುತ್ತಿದ್ದು, ಈಗ ಅದು ಟ್ರೆಂಡ್ ಆಗಿದೆ. ಇದನ್ನೂ ಓದಿ: ಯಶ್ ಹೇರ್ ಸ್ಟೈಲ್ಗೆ ಅಭಿಮಾನಿಗಳು ಫಿದಾ