ಈವರೆಗೂ ಯಶ್ ಅವರನ್ನು ಅಭಿಮಾನಿಗಳು ‘ರಾಕಿಂಗ್ ಸ್ಟಾರ್’ ಎಂದು ಕರೆಯುತ್ತಿದ್ದರು. ಕೆಜಿಎಫ್ ಸಿನಿಮಾ ಬಂದ ಮೇಲೆ ‘ರಾಕಿ ಭಾಯ್’ ಕೂಡ ಆದರು. ಇದೀಗ ಯಶ್ ಅವರನ್ನು ಅಭಿಮಾನಿಗಳು ‘ಬಾಸ್’ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ಅಭಿಮಾನದಿಂದಲೇ ‘ಯಶ್ ಬಾಸ್’ ಎಂದು ಕರೆಯುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2
‘ಬಾಸ್’ ಪದವನ್ನು ಯಶ್ ಕೂಡ ಎಂಜಾಯ್ ಮಾಡುತ್ತಾರೆ. ಅವರ ಕಾರಿನ ಸಂಖ್ಯೆ ‘8055’ ಇದನ್ನು ಸ್ಟೈಲ್ ಆಗಿ ಇಂಗ್ಲಿಷ್ ನಲ್ಲಿ ‘ಬಾಸ್’ ಎಂದು ಕಾಣುವಂತೆ ಬರೆಸಲಾಗಿದೆ. ಅಲ್ಲದೇ, ಇದೀಗ ಅವರ ಕನಸು ಕೂಡ ನನಸಾಗಿದೆ. ಅಭಿಮಾನಿಗಳು ನೆಚ್ಚಿನ ನಟನ ‘ಬಾಸ್’ ಎಂದು ಕರೆಯುವ ಮೂಲಕ ಹೊಸ ಖುಷಿಗೆ ಕಾರಣರಾಗಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್
ಕೆಜಿಎಫ್ 2 ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ‘ಯಶ್ ಬಾಸ್’ ಟ್ವಿಟರ್ ನಲ್ಲಿ ಭಾರೀ ಟ್ರೆಂಡಿಂಗ್ ಆಗಿದೆ. ಯಶ್ ಅಭಿಮಾನಿಗಳು ಏನೇ ಪೋಸ್ಟ್ ಮಾಡಿದರೂ, ಹ್ಯಾಶ್ ಟ್ಯಾಗ್ ಅನ್ನು ಯಶ್ ಬಾಸ್ ಎಂದೇ ಬರೆಯುತ್ತಿದ್ದಾರೆ. ಹಾಗಾಗಿ ಟ್ರೆಂಡಿಂಗ್ ನಲ್ಲಿ ಯಶ್ ಮೊದಲ ಸ್ಥಾನದಲ್ಲಿದ್ದಾರೆ.