ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ ಸೂಪರ್ ಹಿಟ್ ಸಿನಿಮಾ ಮುಗುಳುನಗೆಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಪ್ರತಿಭೆ ಯಶಸ್ವಿನಿ ನಾಚಪ್ಪ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬ ಸಡಗರದಲ್ಲಿರುವ ಈ ಕೊಡಗಿವ ಕುವರಿ “ಒಂದು ಸನ್ನೆ ಒಂದು ಮಾತು” (Ondu Sanne Ondu Maatu) ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
Advertisement
ಅನೇಕ ಚಿತ್ರಗಳಲ್ಲಿ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವದ ಜೊತೆಗೆ ಹಲವಾರು ಚಿತ್ರಗಳಿಗೆ ಡಬ್ಬಿಂಗ್ ಕಲಾವಿದೆಯಾಗಿ ಕಾರ್ಯ ನಿರ್ವಹಿಸಿದವರು ಯಶಸ್ವಿನಿ ನಾಚಪ್ಪ (Yashaswini Nachappa). ಮೂಲತಃ ರಂಗಭೂಮಿಯ ನಂಟಿರುವ ಈ ಪ್ರತಿಭೆ ಇತ್ತೀಚಿನ ದಿನಗಳಲ್ಲಿ ಬಂದಂತಹ ಹೊಸ ಕಲಾವಿದರಿಗೆ ನಟನೆಯಲ್ಲಿ ಟ್ರೇನಿಂಗ್ ಮಾಡಿದ ಅನುಭವವನ್ನೂ ಕೂಡ ಇವರಿಗೆ.
Advertisement
Advertisement
ಟಗರು ಪಲ್ಯ ಸಿನಿಮಾ ಮೂಲಕ ನಾಯಕಿಯಾದ ಅಮೃತಾ ಪ್ರೇಮ್, ಪದವಿ ಪೂರ್ವ ಮೂಲಕ ನಾಯಕನಾದ ಪೃಥ್ವಿ ಶ್ಯಾಮನೂರ್, ಅಂಜಲಿ, ಯಶಾ ಶಿವಕುಮಾರ್ ಹಾಗೂ ಅರ್ಜುನ್ ಗೌಡ ಸೇರಿದಂತೆ ಒಂದಷ್ಟು ಯುವ ಸಿನಿಮೋತ್ಸಾಹಿಗಳಿಗೆ ನಟನೆಯ ತರಬೇತಿ ನೀಡಿದವರು ಯಶಸ್ವಿನಿ. ಅಭಿನಯ ಫ್ಲಸ್ ನಿರ್ದೇಶನದ ಅನುಭವ ಹೊಂದಿರುವ ಈ ಸುಂದರಿ ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹಾಗ್ ನೋಡಿದ್ರೆ ಕೊಡಗಿಗೂ ಹಾಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧವಿದೆ. ನಾಯಕಿಯರ ಕೊಡುಗೆಯಲ್ಲಂತೂ ಕೊಡಗಿನ ಪಾತ್ರ ಬಹಳ ದೊಡ್ಡದು. ಆ ಸಾಲಿನಲ್ಲೀಗ ಯಶಸ್ವಿನಿ ನಾಚಪ್ಪ ಹೊಸ ಸೇರ್ಪಡೆ.
Advertisement
ಅಂದಹಾಗೇ ಥ್ರೀ ಮಂಕೀಸ್ ಶೋ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಒಂದು ಸನ್ನೆ ಒಂದು ಮಾತು ಚಿತ್ರಕ್ಕೆ ಸಂತೋಷ್ ಬಾಗಲಕೋಟಿ (Santhosh Bagalkoti) ಆಕ್ಷನ್ ಕಟ್ ಹೇಳಿದ್ದಾರೆ. ವಿವೇಕ ಚಕ್ರವರ್ತಿ ಸಂಗೀತ, ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಯಶಸ್ವಿನಿ ನಾಚಪ್ಪ ಈ ನಾಯಕಿಯಾಗಿ ಬೆಳ್ಳಿಪರದೆಗೆ ಪರಿಚಿತರಾಗುತ್ತಿದ್ದಾರೆ.