Connect with us

Bengaluru City

ಬಿಡುಗಡೆಯಾಯ್ತು ಶ್ರೀ ಭರತಬಾಹುಬಲಿ – ಗೆಳೆಯನ ಯಶಸ್ಸಿಗೆ ಹಾರೈಸಿದ ಯಶ್

Published

on

ಬೆಂಗಳೂರು: ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಮಂಜು ಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಶ್ರೀ ಭರತಬಾಹುಬಲಿ ಚಿತ್ರ ಇಂದು ಬಿಡುಗಡೆಯಾಗಿದ್ದು, ಗೆಳೆಯನ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಶುಭಹಾರೈಸಿದ್ದಾರೆ.

‘ಶ್ರೀ ಭರತಬಾಹುಬಲಿ’ ಚಿತ್ರದಲ್ಲಿ ನಾಯಕನಾಗಿರುವ ಗೆಳೆಯನಿಗೆ ಯಶ್ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಂಜು ಅವರ ಜೊತೆಗಿರುವ ಫೋಟೋ ಶೇರ್ ಮಾಡಿಕೊಂಡು ಯಶ್ ಗೆಳೆಯನ ಹೊಸ ಹೆಜ್ಜೆಗೆ ಸಾಥ್ ಕೊಟ್ಟಿದ್ದಾರೆ.

ಈ ಹಿಂದೆ ಕೂಡ ರಾಕಿಂಗ್ ಸ್ಟಾರ್ ಯಶ್ ಗೆಳೆಯನ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದರು. ಟ್ರೈಲರ್ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಮಣಿಕಾಂತ್ ಕದ್ರಿ ಸಂಗೀತವಿರುವ ಚಿತ್ರದ ಹಾಡುಗಳು ಕೂಡ ಸಖತ್ ಸೌಂಡ್ ಮಾಡಿದ್ದು, ಇಂದು ಶ್ರೀ ಭರತ ಬಾಹುಬಲಿ ಚಿತ್ರ ತೆರೆಕಂಡಿದೆ. ಟಿ. ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಬರಹಗಾರನಾಗಿ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿ, ನಿರ್ದೇಶಕನಾಗಿ ಜನಮನಗೆದ್ದ ಗೆಳೆಯ ಮಂಜುಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಶ್ರೀ ಭರತಬಾಹುಬಲಿ…

Posted by Yash on Thursday, January 16, 2020

ಪೋಸ್ಟ್ ನಲ್ಲಿ ಏನಿದೆ?
ಬರಹಗಾರನಾಗಿ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿ, ನಿರ್ದೇಶಕನಾಗಿ ಜನಮನಗೆದ್ದ ಗೆಳೆಯ ಮಂಜುಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಶ್ರೀ ಭರತಬಾಹುಬಲಿ ಅವತಾರದಲ್ಲಿ ನಿಮ್ಮುಂದೆ ಬಂದಿದ್ದಾರೆ. ಚಿಕ್ಕನೂ ಜೊತೆಗಿದ್ದಾನೆ ಇಬ್ಬರಿಗೂ ಒಳ್ಳೆಯದಾಗಲಿ. ಶ್ರೀ ಭರತಬಾಹುಬಲಿ ಯಶಸ್ವಿಯಾಗಲಿ ಎಂದು ಬರೆದು ಫೋಟೋ ಹಾಕಿ ಯಶ್ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಗೆ ಯಶ್ ಅಭಿಮಾನಿಗಳು ಕಮೆಂಟ್ ಮಾಡಿ ಮಂಜು ಹಾಗೂ ಅವರ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನಕ್ಕೂ ಸೈ, ನಟನೆಗೂ ಸೈ ಎನ್ನುತ್ತಿದ್ದಾರೆ. ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ನಟನಾಗಿಯೂ ಛಾಪು ತೋರಿಸಲು ಸಿದ್ದರಾಗಿದ್ದಾರೆ ಮಂಜು ಮಾಂಡವ್ಯ. ನಟನೆ ಜೊತೆಗೆ ಸ್ವತಃ ತಾವೇ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಶ್ರೀ ಭರತ ಬಾಹುಬಲಿ ಟೈಟಲ್ಲೇ ವಿಭಿನ್ನವಾಗಿದ್ದು ರೊಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಚಿತ್ರದಲ್ಲಿದ್ದು, ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.

Click to comment

Leave a Reply

Your email address will not be published. Required fields are marked *