ಕೆಜಿಎಫ್ 2 ಸೂಪರ್ ಹಿಟ್ ನಂತರ ಯಶ್ ಕುರಿತು ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸುದ್ದಿಗಳು ಎಷ್ಟೇ ದೊಡ್ಡದಾಗಿ ಸದ್ದು ಮಾಡಿದರೂ, ಯಶ್ ಆಗಲಿ ಅಥವಾ ಅವರ ಟೀಮ್ ಆಗಲಿ ಯಾವುದನ್ನೂ ಖಚಿತಪಡಿಸುವುದಿಲ್ಲ. ಹಾಗಾಗಿ ಮತ್ತೆ ಮತ್ತೆ ಹೊಸ ಹೊಸ ಸುದ್ದಿಗಳು ಹುಟ್ಟುತ್ತಲೇ ಇವೆ. ಮೊನ್ನೆಯಷ್ಟೇ ಯಶ್ ಬಳಿ ಐದು ಸಿನಿಮಾಗಳಿಗೆ ಎಂದು ಸುದ್ದಿ ಆಗಿತ್ತು. ಶಂಕರ್ ಸೇರಿದಂತೆ ಹಲವು ನಿರ್ದೇಶಕರು ಯಶ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎಂದೂ ಹೇಳಲಾಗಿದೆ.
ಈ ನಡುವೆ ತಮ್ಮ ಪಾಡಿಗೆ ತಾವು ದೇಹವನ್ನು ಉರಿಗೊಳಿಸಿಕೊಳ್ಳುವಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಮುಂದಿನ ಸಿನಿಮಾವನ್ನು ಕನ್ನಡದಲ್ಲೇ ಮಾಡುವುದು ಪಕ್ಕಾ ಆಗಿರುವುದರಿಂದ ಮತ್ತು ಆ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡುತ್ತಿರುವುದರಿಂದ ಆ ಚಿತ್ರಕ್ಕಾಗಿ ಯಶ್ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಜಿಮ್ ತರಬೇತುದಾರ ಪಾನಿಪುರಿ ಕಿಟ್ಟ ಅವರ ಗರಡಿಯಲ್ಲಿ ಯಶ್ ದೇಹ ಹುರಿಗೊಳಿಸಿಕೊಳ್ಳುತ್ತಿದ್ದು 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್
ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ಮತ್ತೊಂದು ಬಗೆಯ ಪಾತ್ರವನ್ನು ಮಾಡಬೇಕಾಗಿರುವುದರಿಂದ ಕೆಜಿಎಫ್ ರಾಕಿಭಾಯ್ ತರಹವೇ ಈ ಪಾತ್ರವು ಕಾಣಬಾರದು ಎನ್ನುವ ಉದ್ದೇಶದಿಂದ ತೂಕವನ್ನು ಇಳಿಸಿಕೊಳ್ಳುವ ಕಸರತ್ತಿಗೆ ಕೈ ಹಾಕಿದ್ದಾರಂತೆ ಯಶ್. ಈಗಾಗಲೇ ಹಲವು ದಿನಗಳಿಂದ ಇದೇ ಕೆಲಸದಲ್ಲಿ ಯಶ್ ನಿರತರಾಗಿದ್ದಾರೆ ಎಂದು ಹೇಳುತ್ತಾರೆ ಅವರು ಆಪ್ತರು.