ಸ್ಯಾಂಡಲ್ವುಡ್ (Sandalwood) ನಟಿ ರಾಧಿಕಾ ಪಂಡಿತ್ (Radhika Pandit) ಮಂಗಳವಾರ (ಮಾ.7)ರಂದು ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಭಿಮಾನಿಗಳು ಮನೆ ಬಳಿ ಬರುವುದು ಬೇಡ ಮನೆಯಿಂದ ದೂರ ಆಚರಿಸಿಕೊಳ್ಳುತ್ತಿರುವುದಾಗಿ ರಾಧಿಕಾ ಮುಂಚೆಯೇ ತಿಳಿಸಿದ್ದರು. ಹಾಗಾಗಿ ಇನ್ಸ್ಟಾಗ್ರಾಂನಲ್ಲಿ ಫ್ಯಾನ್ಸ್ ಕೇಳಿರುವ ಹಲವು ಪ್ರಶ್ನೆಗೆ ನಟಿ ಉತ್ತರ ಕೊಟ್ಟಿದ್ದಾರೆ.
Advertisement
ಅಭಿಮಾನಿಗಳು (Fans) ನಮ್ಮ ದಿನ ಅವರ ಸ್ಪೆಷಲ್ ದಿನ ಎಂದು ಆಚರಿಸುವುದು ನೋಡಲು ಖುಷಿಯಾಗುತ್ತಿದೆ. ಈ ಹುಟ್ಟುಹಬ್ಬದ ದಿನ ನೀವು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವೆ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.
Advertisement
Advertisement
ಯಶ್ (Yash) ಅವರಿಂದ ನೀವು ಪಡೆದಿರುವ ಮೊದಲ ಗಿಫ್ಟ್ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ. ತುಂಬಾ ಫ್ರೆಶ್ ಆಗಿರುವ…ಎಂದು ಬರೆದುಕೊಂಡು ಕೊತ್ತುಂಬರಿ ಸೊಪ್ಪು ಫೋಟೋ ಅಪ್ಲೋಡ್ ಮಾಡಿದ್ದಾರೆ. ಮುದ್ದೆ ಮಾಡೋಕೆ ಬರುತ್ತಾ ನಿಮಗೆ ಎಂದು ಫ್ಯಾನ್ ಕೇಳಿದ್ದಾರೆ. ಮುದ್ದೆ ಜೊತೆ ರಾಧಿಕಾ ಮತ್ತು ಯಶ್ ಸೆಲ್ಫಿ ಕ್ಲಿಕ್ ಮಾಡಿಕೊಂಡು ರಾಗಿ ಮುದ್ದೆಗೂ ಸೈ ಮೆಂತ್ಯ ಮುದ್ದೆಗೂ ಸೈ ಎಂದಿದ್ದಾರೆ.
Advertisement
ದಿನ ಯಾವ ಸಮಯ ನಿಮಗೆ ತುಂಬಾ ಇಷ್ಟವಾಗುತ್ತದೆ ಎಂದು ಕೇಳಿದ್ದಾರೆ. ನನಗೆ ಸಂಜೆ ಅಂದ್ರೆ ತುಂಬಾನೇ ಇಷ್ಟವಾಗುತ್ತದೆ. ಮಕ್ಕಳು ಸ್ಕೂಲ್ನಿಂದ ಬರುತ್ತಾರೆ, ಗಂಡ ಕೆಲಸ ಮುಗಿಸಿಕೊಂಡು ಬರುತ್ತಾರೆ. ಊಟ ಮಾಡುವಾಗ ನಮ್ಮ ದಿನ ಹೇಗಿತ್ತು ಎಂದು ಚರ್ಚೆ ಮಾಡುತ್ತೀವಿ ಎಂದು ರಾಧಿಕಾ ಹೇಳಿದ್ದಾರೆ.
ಕೆಜಿಎಫ್ (KGF) ಆರಂಭದಲ್ಲಿ ನೀವು ಹೇಳುತ್ತಿದ್ದ ಹಾಗೆ ಈಗ ಯಶ್ ಗಡ್ಡ ಹಿಂಸೆ ಆಗುತ್ತಾ ಎಂದು ಕೇಳಿದ್ದಾರೆ. ಇಲ್ಲ ಈಗ ಏನು ಅನಿಸುವುದಿಲ್ಲ ಅಭ್ಯಾಸ ಆಗಿದೆ’ ಎಂದಿದ್ದಾರೆ. ಕೈಯಲ್ಲಿ ಸದಾ ಸಿಲ್ವರ್ ರಿಂಗ್ ಇರುತ್ತದೆ, ಏನು ಅದರ ಸ್ಪೆಷಲ್? ನಾನು ಧರಿಸುವುದು ವೈಟ್ ಗೋಲ್ಡ್ ನನ್ನ ಮೊದಲ ಸಂಬಳದಲ್ಲಿ ಖರೀದಿ ಮಾಡಿದ ಸೆಲ್ಫ್ ಗಿಫ್ಟ್ ಎಂದರು. ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಕಿರುತೆರೆ ಸುಂದರಿ ಅಮೂಲ್ಯ ಗೌಡ
ವೃತ್ತಿ ಜೀವನದ ಯಶಸ್ಸು ಮತ್ತು ಅರ್ಥಪೂರ್ಣವಾದ ಮದುವೆ ಜೀವನ ಸೀಕ್ರೆಟ್ ಏನು ಎಂದು ಕೇಳಿದಕ್ಕೆ `ಸ್ನೇಹಾ’ ಎಂದು ಸಿಂಪಲ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಖುಷಿ ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.