ಕೆಜಿಎಫ್, ಕೆಜಿಎಫ್ 2 (KGF 2) ಸಿನಿಮಾದ ಸಕ್ಸಸ್ ನಂತರ ಯಶ್ ‘ಟಾಕ್ಸಿಕ್’ (Toxic Film) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದೀಗ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲು ಹುಮಾ ಖುರೇಶಿ (Huma qureshi) ಎಂಟ್ರಿ ಕೊಟ್ಟಿದ್ದಾರೆ. ಮುಖ್ಯ ಪಾತ್ರಕ್ಕೆ ಹುಮಾ ನಟಿಸುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಟಾಕ್ಸಿಕ್’ ಸಿನಿಮಾದ ಅಡ್ಡಾದಿಂದ ಹಲವು ಹೆಸರುಗಳು ಕೇಳಿ ಬರುತ್ತಿವೆ. ಕರೀನಾ ಕಪೂರ್, ನಯನತಾರಾ, ಕಿಯಾರಾ ಸೇರಿದಂತೆ ಹಲವು ನಟಿಮಣಿಯರ ಹೆಸರು ಸದ್ದು ಮಾಡುತ್ತಿದೆ. ಹುಮಾ ಖುರೇಶಿ ನಟಿಸಲಿರುವ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ:ಉಪೇಂದ್ರ ನಟನೆಯ ‘ಎ’ ಸಿನಿಮಾ ರೀ ರಿಲೀಸ್
ಹುಮಾ ಖುರೇಶಿ ಅವರು ಯಶ್ ಸಿನಿಮಾದಲ್ಲಿ ನಟಿಸುತ್ತಾರಾ? ಅಥವಾ ಇದು ಹರಿದಾಡುತ್ತಿರುವ ಸುದ್ದಿನಾ ಎಂದು ಕಾದುನೋಡಬೇಕಿದೆ. ಹುಮಾ ಖುರೇಶಿ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ರೆ ಇದು ಅವರು ನಟಿಸುವ ಕನ್ನಡದ ಮೊದಲ ಚಿತ್ರವಾಗಲಿದೆ.
ಅಂದಹಾಗೆ, ಯಶ್ ಮೊದಲ ಬಾರಿಗೆ ‘ಟಾಕ್ಸಿಕ್’ ಸಿನಿಮಾದ ಮೂಲಕ ನಿರ್ಮಾಪಕನಾಗಿ ಎಂಟ್ರಿ ಕೊಡ್ತಿದ್ದಾರೆ. ಕೆವಿಎನ್ ನಿರ್ಮಾಣ ಸಂಸ್ಥೆ ಜೊತೆ ಯಶ್ ಕೈಜೋಡಿಸಿದ್ದಾರೆ.