ಬೆಂಗಳೂರು: ಹಿರಿಯ ನಟಿ ಅನುಮತಿ ಪಡೆದು ರಾಕಿಂಗ್ ಸ್ಟಾರ್ ಯಶ್ ರೆಬಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
66ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅಂಬರೀಷ್‍ಗೆ ಬೆಂಗಳೂರಿನ ಕಲಾವಿದರ ಸಂಘದಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಯಶ್ ಅವರು ಯಶ್ ಹಿರಿಯ ನಟಿ ಸುಮಲತಾರಿಂದ ಅನುಮತಿ ಪಡೆದು ರಾಧಿಕಾ ಪಂಡಿತ್ ಅವರನ್ನು ಬಿಟ್ಟು ಒಬ್ಬರೇ ಪಾಲ್ಗೊಂಡಿದ್ದರು.
ಯಶ್‍ಗೆ ಗಡ್ಡ ತೆಗೆಯುವಂತೆ ಹಲವು ದಿನಗಳ ಹಿಂದೆ ಅಂಬರೀಷ್ ವಾರ್ನ್ ಮಾಡಿದ್ದರು. ಆದರೆ ಯಶ್ ಕೆಜಿಎಫ್ ಸಿನಿಮಾ ಮುಗಿದು ಪ್ರಮೋಶನ್ ಆ್ಯಕ್ಟಿವಿಟಿ ಮುಗಿಯೋವರೆಗೂ ಗಡ್ಡ ತೆಗೆಯುವಂತಿಲ್ಲ. ಹಾಗಾಗಿ ಗಡ್ಡ ತೆಗೆಯದೇ ಅಂಬಿ ಮುಂದೆ ಹೋದರೇ ಬೈಯುತ್ತಾರೋ ಏನೋ ಎಂದು ಮೊದಲು ನಟಿ ಸುಮಲತಾಗೆ ಕಾಲ್ ಮಾಡಿ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಅನಂತರವಷ್ಟೇ ಅಂಬಿ ಸನ್ಮಾನ ಕಾರ್ಯಕ್ರಮಕ್ಕೆ ಯಶ್ ಹೋಗಿದ್ದಾರೆ.
ನಾನು ಬಾಲ್ಯದ ದಿನಗಳಿಂದಲೂ ಅಂಬರೀಷ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಅಂತ, ನಾಗರಹಾವು ಸೇರಿದಂತೆ ಹಲವು ಸಿನಿಮಾಗಳು ನನಗೆ ಬಹಳ ಪರಿಣಾಮ ಬೀರಿವೆ. ನನ್ನ ಸಿನಿಕೆರಿಯರ್ ನಲ್ಲಿ ರೆಬೆಲ್ ಪಾತ್ರಗಳನ್ನು ಮಾಡುವ ಆಸೆ ಇಟ್ಟುಕೊಂಡಿದ್ದೇನೆ. ಮೊದಲು ಜಲೀಲನ ಥರ ಕ್ಯಾರೆಕ್ಟರ್ ಮಾಡಬೇಕು ಎಂದು ಮೈಂಡ್‍ನಲ್ಲಿ ಫಿಕ್ಸ್ ಆಗಿತ್ತು ಎಂದು ಸ್ವತಃ ಯಶ್ ಅಂಬರೀಷ್ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಯಶ್‍ಗೆ ನೆಗೆಟೀವ್ ಶೇಡ್ ಪಾತ್ರಗಳಂದರೆ ಬಹಳ ಇಷ್ಟ. ಲವ್ವರ್ ಬಾಯ್‍ಗೂ ಸೈ ಆ್ಯಕ್ಷನ್‍ಗೂ ಜೈ ಎನ್ನುವ ಯಶ್ ಈಗಾಗಲೇ ಲವ್ವರ್ ಬಾಯ್ ಆಗಿ ಮಿಂಚಿದ್ದಾರೆ. ಆ್ಯಕ್ಷನ್ ಸಿನಿಮಾದಲ್ಲೂ ಕೂಡ ಮಿಂಚಿದ್ದಾರೆ. ಈಗ ಜಲೀಲನಾಗಿ ಮಿಂಚಬೇಕು ಎನ್ನುವ ಆಸೆಯನ್ನು ಯಶ್ ವ್ಯಕ್ತಪಡಿಸಿದ್ದಾರೆ.