ನ್ಯಾಷನಲ್ ಸ್ಟಾರ್ ಯಶ್‌ಗೆ ಅಪಾರ ಅಭಿಮಾನಿಗಳ ಬಳಗವಿದೆ. ಅದರಲ್ಲೂ `ಕೆಜಿಎಫ್ 2′ ಸಿನಿಮಾ ಬಿಡುಗಡೆಯಾದ ನಂತರ ಯಶ್ ಹವಾ ಹೆಚ್ಚಾಗಿದೆ. ಯಶ್‌ನಂತೆ ಅವರ ಮಕ್ಕಳು ಐರಾ ಹಾಗೂ ಯಥರ್ವ್ನನ್ನು ಫ್ಯಾನ್ಸ್ ಇಷ್ಟಪಡುತ್ತಾರೆ. ಸದ್ಯ ರಾಧಿಕಾ ಶೇರ್ ಮಾಡಿರುವ ಮಗನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಭಿಮಾನಿಗಳು ಅಪ್ಪನಂತೆ ಮಗ ಎನ್ನುತ್ತಿದ್ದಾರೆ.
ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಒಂದು ಸ್ಟೋರಿ ಹಾಕಿಕೊಂಡಿದ್ದಾರೆ. ಅದರಲ್ಲಿ ಯಥರ್ವ್ ಬೀಚ್‌ನ ದಡದಲ್ಲಿ ಕಡಲಿಗೆ ಮುಖ ಮಾಡಿ ನಿಂತಿದ್ದು, ಅದಕ್ಕೆ ರಾಧಿಕಾ ಎಲ್ಲೋ ನೋಡಿದ ಹಾಗಿದೆ ಅಲ್ಲವಾ ಎಂದು ಕ್ಯಾಪ್ಷನ್ ಮಾಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದಾ ವಿಶೇಷತೆ ಎಂದರೆ, ಯಥರ್ವ್ ಯಶ್ ರೀತಿಯಲ್ಲಿ ಪೋಸ್ ಕೊಟ್ಟಿರೋದು ಈ ಫೋಟೋ ನೋಡಿದರೆ ನಮಗೆ ಕೆಜಿಎಫ್ ಸಿನಿಮಾ ನೆನಪಾಗುತ್ತದೆ. `ಕೆಜಿಎಫ್’ ಅಭಿಮಾನಿಗಳಿಗೆ ತಕ್ಷಣ ರಾಕಿಭಾಯ್ ಪೋಸ್ ಕಣ್ಣು ಮುಂದೆ ಬರುತ್ತದೆ. ಇದನ್ನೂ ಓದಿ: ವೈಟ್ ಡ್ರೆಸ್‌ನಲ್ಲಿ ಮಿಂಚಿದ ಬಹುಭಾಷಾ ನಟಿ ಪ್ರಿಯಾಮಣಿ

Live Tv


