ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಇನ್ಸ್ಟಾದಲ್ಲಿ ಮಗಳ ಫೋಟೋ ಹಂಚಿಕೊಂಡಿದ್ದಾರೆ.
ಕ್ರಿಸ್ಮಸ್ ಹಬ್ಬವಿದ್ದ ಹಿನ್ನೆಲೆಯಲ್ಲಿ ಯಶ್, ತಮ್ಮ ಮಗಳು ಐರಾ ಕ್ರಿಸ್ಮಸ್ ಟ್ರೀ ಮುಂದೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ “ಕ್ರಿಸ್ಮಸ್ ಟ್ರೀ ಇಲ್ಲಿ ಹೊಳೆಯುತ್ತಿರಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ ಹೊಳೆಯುವ ಬೆಳಕು ಅದರ ಮುಂದೆ ನಿಂತಿದೆ. (ನಾನು ತಂದೆಯಾಗಿ ಮಾತನಾಡುತ್ತಿರುವುದು, ಏನೂ ಮಾಡುವುದಕ್ಕೆ ಆಗಲ್ಲ). ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
- Advertisement 2
- Advertisement 3
ಇತ್ತ ರಾಧಿಕಾ ಪಂಡಿತ್ ಅವರು ಯಶ್ ಜೊತೆಗಿರುವ ಫೋಟೋ ಹಂಚಿಕೊಂಡು ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. “ಕಳೆದ ಎರಡು ಕ್ರಿಸ್ಮಸ್ಗೆ ಐರಾ ಮತ್ತು ಜೂನಿಯರ್ ಯಶ್ ಅಂತಹ ಅಮೂಲ್ಯವಾದ ಉಡುಗೊರೆಯನ್ನು ನಮಗೆ ನೀಡಿರುವುದಕ್ಕೆ ಸಂತಾಗೆ ಧನ್ಯವಾದಗಳು. ನಮ್ಮ ಜಾರುಬಂಡಿಯ ಮೇಲೆ ಸವಾರಿ ಮಾಡಲು ನಾವು ಸಿದ್ಧ. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದರು.
- Advertisement 4
ರಾಧಿಕಾ 2018 ಡಿಸೆಂಬರ್ ತಿಂಗಳಲ್ಲಿ ಐರಾಗೆ ಜನ್ಮ ಕೊಟ್ಟಿದ್ದರು. ಇನ್ನೂ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸದ್ಯಕ್ಕೆ ಜೂನಿಯರ್ ಯಶ್ನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.