‘ಕೆಜಿಎಫ್ 2′ (KGF2) ಸ್ಟಾರ್ ಯಶ್ (Yash) ಬಿಸಿಲ ನಾಡು ಮೆರವಣಿಗೆ ಹೊರಟಿದ್ದಾರೆ. ಮೊನ್ನೆ ಮೊನ್ನೆ ಇಲ್ಲಿದ್ದವರು ಈಗ ಸಡನ್ನಾಗಿ ಬಳ್ಳಾರಿ ಬಿಸಿಲಿನಲ್ಲಿ ನಿಂತು ಅಭಿಮಾನಿಗಳ ಕಣ್ಣಲ್ಲಿ ಮಳೆ ಸುರಿಸಿದ್ದಾರೆ. ಸದ್ಯ ರಾಜಕೀಯ ಎಂಟ್ರಿ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಕರುವಿಗೆ ಬಾಟಲಿ ಹಾಲು ಕುಡಿಸಿದ ಯಶ್ ಮಗಳು ಐರಾ
Advertisement
ರಾಕಿಭಾಯ್ ಉತ್ತರ ಕರ್ನಾಟಕಕ್ಕೆ ಹಲವಾರು ಬಾರಿ ಹೋಗಿದ್ದಾರೆ. ಕೆರೆಯ ಜೀರ್ಣೋದ್ಧಾರ ಮಾಡಲು ಆ ನೆಲಕ್ಕೆ ಕಾಲಿಟ್ಟಿದ್ದರು. ಅದಾದ ಮೇಲೆ ಅನೇಕ ಸಾರಿ, ಬೇರೆ ಬೇರೆ ಕಾರಣಗಳಿಗೆ ಯಶ್ ಬಿಸಿಲ ನಾಡಿನಲ್ಲಿ ನಿಂತು ನೀರಾಗಿ ಬಂದಿದ್ದರು. ಈಗ ಮತ್ತೆ ಬಳ್ಳಾರಿಗೆ ಹೋಗಿದ್ದಾರೆ. ಬೆಂಗಳೂರಿನಿಂದ ಸ್ಪೆಶಲ್ ಪ್ರಯಾಣ ಮಾಡಿದ್ದಾರೆ. ರಾಕಿಭಾಯ್ ನಮ್ಮ ಊರಲ್ಲಿ? ಬಳ್ಳಾರಿ ಮಂದಿ ಹುಚ್ಚೆದ್ದು ಕುಣಿದಿದ್ದಾರೆ.
Advertisement
ಮೊದಲೇ ಅದು ಬಳ್ಳಾರಿ. ಗಣಿ ನಾಡು. ಧೂಳು, ಬಿಸಿಲು, ನೆಲ ಸುಡುವ ಕಾವು. ಅದರಲ್ಲೂ ಇದು ಬೇಸಿಕೆ ಕಾಲ. ನೆಲಕ್ಕೆ ಕಾಲು ಊರಲೇ ಸಾಧ್ಯ ಇಲ್ಲ. ಆದರೇನಂತೆ ಯಶ್ ಬಂದ ಮೇಲೆ ಬಿಸಿಲನ್ನು ಮರೆತು ಜನರು ಸೇರಿದ್ದರು. ಅದಕ್ಕೆ ಕಾರಣ ಹಂಚಿಕೆದಾರ ಸಾಯಿ ನಿರ್ಮಿಸಿದ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನದ ಉದ್ಘಾಟನೆ. ಇದೇ ಸಾಯಿ ‘ಕೆಜಿಎಫ್’ ಮೊದಲ ಭಾಗವನ್ನು ಆಂಧ್ರದಲ್ಲಿ ಹಂಚಿಕೆ ಮಾಡಿದ್ದರು. ಇದನ್ನೂ ಓದಿ:ತಮಿಳು, ಮಲಯಾಳಂ ಚಿತ್ರರಂಗಕ್ಕೆ ಕೆಆರ್ ಜಿ ಸ್ಟುಡಿಯೋಸ್ ಎಂಟ್ರಿ
Advertisement
‘ಕೆಜಿಎಫ್’ ಮೊದಲ ಭಾಗವನ್ನು ಅದ್ಧೂರಿಯಾಗಿ ಅಷ್ಟೇ ಪ್ಯಾಶಿನೇಟ್ ರೀತಿಯಲ್ಲಿ ಸಾಯಿ ಬಿಡುಗಡೆ ಮಾಡಿದ್ದರು. ಆಂಧ್ರದಲ್ಲಿ ಹಿಟ್ ಆಗಲು ಸಾಯಿ ಸಿನಿಮಾ ಪ್ರೀತಿ ಹಾಗೂ ವ್ಯಾಮೋಹವೂ ಕಾರಣವಾಗಿತ್ತು. ಅದಕ್ಕಾಗಿಯೇ ದೇವಸ್ಥಾನದ ಉದ್ಘಾಟನೆಗೆ ಬರುತ್ತೇನೆ ಎಂದಿದ್ದರು ಯಶ್. ಈಗ ಆ ಮಾತನ್ನು ಉಳಿಸಿಕೊಂಡಿದ್ದಾರೆ. ‘ಟಾಕ್ಸಿಕ್’ (Toxic) ಸಿನಿಮಾ ಇನ್ನೇನು ಆರಂಭವಾಗಲಿದೆ. ಅದರ ನಡುವೆಯೂ ಬಳ್ಳಾರಿ ಮಣ್ಣಿಗೆ ಶರಣಾಗಿದ್ದಾರೆ.
Advertisement
ರಾಜಕೀಯಕ್ಕೆ ಹೋಗುತ್ತಾರಾ ಯಶ್? ಕಾರಣ ಹಿಂದೊಮ್ಮೆ ಸುಮಲತಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಮತ್ತೆ ಎಲೆಕ್ಷನ್ ಬಂದಿದೆ. ಈಗ ಏನು ಮಾಡುತ್ತಾರೆ ? ದರ್ಶನ್ ಜೊತೆ ಮತ್ತೆ ಕೈ ಜೋಡಿಸಿ ಜೋಡೆತ್ತಾಗುತ್ತಾರಾ? ಏನು ಯಶ್ ನಿಲುವೇನು? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಯಶ್ ಕೊಟ್ಟಿದ್ದಾರೆ.
ನಾನು ರಾಜಕೀಯಕ್ಕೆ ಬರಲ್ಲ. ನನಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟವಾಗಿ ಯಶ್ ಮಾತನಾಡಿದ್ದಾರೆ. ಸದ್ಯ ಯಶ್ ಮುಂದೆ ‘ಟಾಕ್ಸಿಕ್’ ಸಿನಿಮಾ ಬಿಟ್ಟು ಯಾವುದರ ಕಡೆ ಕೂಡ ಗಮನ ಕೊಡುತ್ತಿಲ್ಲ.