ನಟ ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳೊಂದಿಗೆ ವಿಮಾನ ಯಾನ ಮಾಡಿದ್ದಾರೆ. ವಿಮಾನದಲ್ಲೇ ಇಬ್ಬರೂ ಮಕ್ಕಳು ಒಂದೊಂದು ಪುಸ್ತಕ ಹಿಡಿದುಕೊಂಡು, ಅದರೊಂದಿಗೆ ಆಟವಾಡುತ್ತಿರುವ ಸನ್ನಿವೇಶವನ್ನು ಸೆರೆ ಹಿಡಿದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಾಧಿಕಾ ಪಂಡಿತ್. ಇದನ್ನೂ ಓದಿ : ನಟ ಚೇತನ್ ಬಂಧನ ಹಿಂದಿನ ರೋಚಕ ಸ್ಟೋರಿ : ಜೈಲಿನಲ್ಲಿ ಚೇತನ್ 4ನೇ ದಿನ
Advertisement
ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋ ಹಂಚಿಕೊಂಡಿದ್ದು ಮಾತ್ರವಲ್ಲ, ‘ಇನ್ ಫ್ಲೈಟ್ ಎಂಟರ್ ಟೇನ್ಮೆಂಟ್’ ಎಂದೂ ಅದಕ್ಕೆ ಅಡಿಬರಹ ಕೊಟ್ಟಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಕಲಾವಿದನ ಮಕ್ಕಳು ಇದೀಗ ಫ್ಲೈಟ್ ನಲ್ಲಿ ಮನರಂಜನೆ ಕೊಡುವಷ್ಟು ಬೆಳೆದಿದ್ದು ಹೆಮ್ಮೆ ಎಂದು ಕೆಲವರು ಈ ಫೋಟೋಗೆ ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್
Advertisement
Advertisement
ಮುಂಬೈ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಯಶ್ ದಂಪತಿ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ಸೆರೆ ಹಿಡಿದಿರುವ ಫೋಟೋ ಇದಾಗಿದ್ದು, ಮಕ್ಕಳ ಮನರಂಜನೆಯ ಕ್ಷಣಗಳನ್ನು ರಾಧಿಕಾ ಸೆರೆ ಹಿಡಿದು, ಅಭಿಮಾನಿಗಳಿಗಾಗಿ ಆ ಫೋಟೋ ಹಂಚಿಕೊಂಡಿದ್ದಾರೆ.