Bengaluru City
ಭಗೀರಥನಾದ್ರು, ಈಗ ಮೇವು ಪೂರೈಕೆಗೆ ಯಶೋಮಾರ್ಗ ಪ್ಲಾನ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಯಶೋಮಾರ್ಗದ ಮೂಲಕ ಹಲವು ಸಮಾಜಮುಖಿ ಕೆಲಸಗಳನ್ನ ಮಾಡ್ತಿದ್ದಾರೆ. ಸದ್ಯ ಯಶ್ ಮತ್ತೊಂದು ರೈತಪರ ಕಾಳಜಿಯ ಕೆಲಸಕ್ಕೆ ಕೈ ಹಾಕಿದ್ದಾರೆ.
ಮೇವಿನ ಕೊರತೆಯಿಂದ ಬಳಲ್ತಿರೋ ಜಾನುವಾರುಗಳಿಗೆ ಮೇವು ಒದಗಿಸುವ ಕಾರ್ಯಕ್ಕೆ ಯಶ್ ಕೈ ಜೋಡಿಸಿದ್ದಾರೆ. ಕೊಳ್ಳೆಗಾಲ ಸಮೀಪದ ಮಲೆಮಹದೇಶ್ವರ ಬೆಟ್ಟ ಹಾಗೂ ಅಲ್ಲಿನ ಹಲವು ಪ್ರದೇಶಗಳಿಗೆ ತೆರೆಳಿ ಅಲ್ಲಿ ಜಾನುವಾರುಗಳಿಗೆ ಆಗ್ತಿದ್ದ ಮೇವಿನ ಸಮಸ್ಯೆ ಬಗ್ಗೆ ಆದ ಮಾಧ್ಯಮದ ವರದಿ ಹಾಗು ವಿಡಿಯೋ ನೊಡಿದ್ದಾರೆ. ಸದ್ಯ ಮೇವಿನ ಸಮಸ್ಯೆ ನಿವಾರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲಿನ ಗೋವುಗಳಿಗೆ ಒದಗಿಸುತ್ತಿರುವ ಮೇವು ಸಾಲದಾಗಿದ್ದು ಯಶ್ ಈ ಕುರಿತು ಸಂಸದ ದೃವನಾರಾಯಣ್ ಹಾಗೂ ಎ ಮಂಜು ಜೊತೆ ಮಾತನಾಡಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ
ಸದ್ಯ ಯಶೋಮಾರ್ಗ ಫೌಂಡೇಷನ್ ಮೂಲಕ ಹಲವು ರೈತಪರ ಕಾರ್ಯಕ್ಕೆ ಮುಂದಾಗಿರೋ ಯಶ್ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಅಲ್ಲಿನ ಜಾನುವಾರುಗಳಿಗೆ ಮೇವಿನ ತೊಂದರೆ ನಿವಾರಣೆಯಾಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದೇನೆ ಅಂತ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.
