‘ಕೆಜಿಎಫ್’ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಕುಟುಂಬದ ಜೊತೆ ಹೊಸ ವರ್ಷ ಆಚರಿಸಿದ್ದಾರೆ. ಫ್ಯಾಮಿಲಿ ಜೊತೆಗಿನ ಸುಂದರ ಫೋಟೋಗಳನ್ನು ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕ್ಯಾನ್ಸರ್ ಗೆದ್ದ ಶಿವಣ್ಣ- ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ನಟ
Advertisement
ನಮ್ಮ ಪುಟ್ಟ ಕುಟುಂಬದ ಕಡೆಯಿಂದ ಹೊಸ ವರ್ಷಕ್ಕೆ ಶುಭಾಶಯಗಳು. ನಿಮ್ಮೆಲ್ಲರಿಗೂ ಸಂತೋಷ, ಪ್ರೀತಿ ಮತ್ತು ನಗು ತುಂಬಿರಲಿ ಎಂದು ಹಾರೈಸುತ್ತೇನೆ. ನಮ್ಮ ಕಡೆಯಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು ಎಂದು ಯಶ್ ದಂಪತಿ ಫ್ಯಾನ್ಸ್‌ಗೆ ವಿಶ್ ಮಾಡಿದ್ದಾರೆ. ಯಶ್ ಕುಟುಂಬದ ಹ್ಯಾಪಿ ಮೂಮೆಂಟ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
Advertisement
View this post on Instagram
Advertisement
ಇನ್ನೂ ಯಶ್ ಕಂದು ಬಣ್ಣದ ಧಿರಿಸಿನಲ್ಲಿದ್ರೆ, ರಾಧಿಕಾ ಬಿಳಿ ಬಣ್ಣದ ಉಡುಗೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಬ್ಯೂಟಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಹೊಸ ವರ್ಷಕ್ಕೆ ಕಿಚ್ಚ ಕೊಟ್ರು ಗುಡ್ ನ್ಯೂಸ್: ಹೀರೋ ಆಗಿ ಸುದೀಪ್ ಅಕ್ಕನ ಮಗ ಎಂಟ್ರಿ
Advertisement
ಸದ್ಯ ಯಶ್ ಅವರು ಟಾಕ್ಸಿಕ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ ’ರಾಮಾಯಣ’ (Ramayana) ಸಿನಿಮಾದಲ್ಲಿ ಸಹ ನಿರ್ಮಾಪಕನಾಗಿ ಸಾಥ್ ಕೊಟ್ಟಿದ್ದಾರೆ. ಜೊತೆಗೆ ರಾಮನ ಪಾತ್ರಧಾರಿ ರಣ್‌ಬೀರ್ ಕಪೂರ್ ಮುಂದೆ ರಾವಣನಾಗಿ ಯಶ್ ಅಬ್ಬರಿಸಲಿದ್ದಾರೆ.