ರಾಕಿಂಗ್ ಸ್ಟಾರ್ (Rocking Star) ಯಶ್ ಇಂದು ತಮ್ಮ ಹುಟ್ಟು ಹಬ್ಬ (Birthday)ವನ್ನು ಕೆಲವೇ ಕೆಲವು ಆಪ್ತರ ಜೊತೆ ದುಬೈನಲ್ಲಿ ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಕುಟುಂಬದ ಜೊತೆ ಎರಡು ದಿನಗಳ ಹಿಂದೆಯಷ್ಟೇ ದುಬೈಗೆ ಹಾರಿರುವ ಯಶ್ (Yash), ಅಲ್ಲಿಯೇ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ಸಿಗಲಿದೆ ಎಂದು ಅಭಿಮಾನಿಗಳು ಕಾದಿದ್ದರು. ಆದರೆ, ಸ್ವಲ್ಪ ದಿನ ಕಾಯಿರಿ ದೊಡ್ಡ ಸುದ್ದಿಯನ್ನೇ ಕೊಡುತ್ತೇನೆ ಎಂದು ಹೇಳಿ ಪತ್ರ ಬರೆದಿದ್ದರು.
Advertisement
ಯಶ್ ಅವರ ಹೊಸ ಸಿನಿಮಾದ ಬಗ್ಗೆ ಆರೇಳು ತಿಂಗಳಿಂದ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ. ಬಂದ ವೇಗದಲ್ಲೇ ಅವರು ಹುಸಿಯಾಗುತ್ತಿವೆ. ಆದರೆ, ಇತ್ತೀಚೆಗಷ್ಟೇ ಅವರ ಹೊಸ ಸಿನಿಮಾದ ಅಚ್ಚರಿಯ ಸಂಗತಿಯೊಂದು ಹೊರ ಬಿದ್ದಿತ್ತು. ಅವರ ಮುಂದಿನ ಸಿನಿಮಾ ಬಜೆಟ್ ಬರೋಬ್ಬರಿ 400 ಕೋಟಿ ಎಂದು ಹೇಳಲಾಗಿತ್ತು. ಈ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವ ಸಂಸ್ಥೆ ಕೆವಿಎನ್ ಎಂದು ಹೇಳಲಾಗಿತ್ತು. ಅದೀಗ ನಿಜ ಎನ್ನುವಂತೆ ಸಾಕ್ಷಿಯೊಂದು ಸಿಕ್ಕಿದೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಕಲಹ?
Advertisement
Advertisement
ಯಶ್ ಅವರು 19ನೇ ಸಿನಿಮಾವನ್ನು ದಕ್ಷಿಣದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಮಾಡಲಿದೆ ಎನ್ನುವ ವರ್ತಮಾನ ಗಾಂಧಿನಗರದಲ್ಲಿ ಬಲವಾಗಿಯೇ ಕೇಳಿ ಬರುತ್ತಿತ್ತು. ಅದು ನಿಜ ಎನ್ನುವಂತೆ ಕೆವಿಎನ್ ಪ್ರೊಡಕ್ಷನ್ ನ ವೆಂಕಟ್ ಕೋಣಂಕಿ ನಾರಾಯಣ್ (Venkat Konanki Narayan) ಅವರು ಯಶ್ ಜೊತೆ ಕಾಣಿಸಿಕೊಂಡಿದ್ದಾರೆ. ಹುಟ್ಟು ಹಬ್ಬದ ಪಾರ್ಟಿಯಲ್ಲಿ ವೆಂಕಟ್ ಕೂಡ ಭಾಗಿಯಾಗಿ ಶುಭ ಹಾರೈಸಿದ್ದಾರೆ. ಹಾಗಾಗಿ ಇವರೇ ಮುಂದಿನ ಸಿನಿಮಾದ ನಿರ್ಮಾಪಕರು ಎನ್ನುವುದು ನಿಕ್ಕಿಯಾದಂತಾಗಿದೆ.
Advertisement
ಈ ಹಿಂದೆ ಯಶ್, ಗೋವಾದ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಇದೇ ವೆಂಕಟ್ ಕೂಡ ಜೊತೆಗಿದ್ದರು. ಅವತ್ತೇ ಒಂದು ಸುಳಿವನ್ನೂ ಅವರು ಬಿಟ್ಟುಕೊಟ್ಟಿದ್ದರು. ಪದೇ ಪದೇ ಯಶ್ ಜೊತೆ ವೆಂಕಟ್ ಕಾಣಿಸಿಕೊಳ್ಳುತ್ತಿರುವುದು ಸುದ್ದಿಗೆ ಪುಷ್ಠಿ ನೀಡಿದಂತಾಗಿದೆ. ಸ್ವತಃ ಯಶ್ ಅವರೇ ಹೇಳಿದಂತೆ ಮುಂದಿನ ದಿನಗಳಲ್ಲಿ ದೊಡ್ಡ ಸುದ್ದಿಯನ್ನೇ ಅವರ ಅಭಿಮಾನಿಗಳಿಗೆ ಅವರು ಕೊಡಲಿದ್ದಾರೆ. ಆ ದೊಡ್ಡ ಸುದ್ದಿಯಲ್ಲಿ ವೆಂಕಟ್ ಅವರ ಹೆಸರೂ ಇರಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k