ರಾಕಿಭಾಯ್ `ಕೆಜಿಎಫ್ 2′ ಚಿತ್ರಕ್ಕಾಗಿ 100 ಟಿಕೆಟ್ ಬುಕ್ ಮಾಡಿದ ಮುಂಬೈನ ಯಶ್ ಫ್ಯಾನ್

Public TV
1 Min Read
yash fan kgf 2

ಲ್ಲೆಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್ 2′ ಚಿತ್ರದ ಹಾವಳಿ ಜೋರಾಗಿದೆ. ಚಿತ್ರದ ಟ್ರೇಲರ್ ಮೂಲಕನೇ ದಾಖಲೆ ಬರೆದಿರೋ `ಕೆಜಿಎಫ್ 2′ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಯಶ್ ನಟನೆಯ ಬಹುನಿರೀಕ್ಷಿತ `ಕೆಜಿಎಫ್ 2′ ಇದೇ ಏಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದೆಲ್ಲಡೆ ಚಿತ್ರ ರಿಲೀಸ್ ಆಗುತ್ತಿದೆ.

kgf 2 yash

ಈಗಾಗಲೇ `ಕೆಜಿಎಫ್ 2′ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಯುಎಸ್‌ಎನಲ್ಲಿ ಒಂದು ದಿನ ಮುಂಚೆನೇ ಪ್ರೀಮಿಯರ್ ಶೋ ಹಾಕಲಾಗಿದೆ. ಇದಕ್ಕಿನ್ನೂ 6 ದಿನಗಳಷ್ಟೇ ಬಾಕಿಯಿದೆ. ಫಸ್ಟ್ ಡೇ ಫಸ್ಟ್ ಶೋ `ಕೆಜಿಎಫ್ 2′ ಚಿತ್ರವನ್ನ ನೋಡಬೇಕು ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ.

KGF 2 Yash 4

ವಿಶ್ವದೆಲ್ಲಡೆ ಕಾಯ್ತಿರೋ ರಾಕಿಭಾಯ್ ಸಿನಿಮಾಗಾಗಿ ಮುಂಬೈನ ಯಶ್ ಅಭಿಮಾನಿಯೊಬ್ಬ ಬರೋಬ್ಬರಿ 100 ಟಿಕೆಟ್ ಖರೀದಿಸಿ ಅಚ್ಚರಿ ಮೂಡಿಸಿದ್ದಾನೆ. ಈ ಮುನ್ನ ಈತ ಭಾಯಿಜಾನ್ ಸಲ್ಮಾನ್ ಖಾನ್ ಸಿನಿಮಾಗೆ 100 ಟಿಕೆಟ್ ಖರೀದಿಸಿದರಂತೆ. ಈಗ ಫಸ್ಟ್ ಟೈಮ್ ಸೌತ್ ಸಿನಿಮಾದ ಹೀರೋ ಯಶ್ ಸಿನಿಮಾಗೆ 100 ಟಿಕೆಟ್ ಬುಕ್ ಮಾಡಿದ್ದಾರೆ. ಇದನ್ನು ಓದಿ: ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರಕ್ಕೆ ಶ್ರೀನಿ ನಿರ್ದೇಶನ

kgf 2 fan

ಇನ್ನು ನ್ಯಾಷನಲ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಜತೆಯಾಗಿದ್ದು, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟರ್ ಲುಕ್, ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ `ಕೆಜಿಎಫ್ 2′ ಸಿನಿಮಾ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *