ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿ ಭಾಯ್- ಇದು ‘ಟಾಕ್ಸಿಕ್‌’ ಚಿತ್ರದಲ್ಲಿನ ಯಶ್‌ ಕ್ಯಾರೆಕ್ಟರ್?

Public TV
1 Min Read
yash

ರಾಕಿಂಗ್ ಸ್ಟಾರ್ ಯಶ್ ಅವರು ‘ಕೆಜಿಎಫ್ 2’ (KGF 2) ಸಕ್ಸಸ್ ನಂತರ ಟಾಕ್ಸಿಕ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಮುಹೂರ್ತ ಆದ್ಮೇಲೆ ಇದರ ಬಗ್ಗೆ ಏನು ಅಪ್‌ಡೇಟ್ ಸಿಗುತ್ತಿಲ್ಲ ಎಂದು ನಿರಾಸೆಯಲ್ಲಿದ್ದ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ಟಾಕ್ಸಿಕ್’ ಚಿತ್ರದ್ದೇ ಎನ್ನಲಾದ ನಟನ ನಯಾ ಲುಕ್ ರಿವೀಲ್ ಆಗಿದೆ. ವಕೀಲ್ ಸಾಬ್ ಗೆಟಪ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್‌ ಶೆಟ್ಟಿ

yash 1

ಯಶ್ (Yash) ನಟನೆಯ ಮುಂಬರುವ ಸಿನಿಮಾ ‘ಟಾಕ್ಸಿಕ್’ (Toxic) ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಹೀಗಿರುವಾಗ ಕಪ್ಪು ಕೋಟ್ ಧರಿಸಿ ಲಾಯರ್ ಗೆಟಪ್‌ನಲ್ಲಿ ಸ್ಟೈಲೀಶ್ ಆಗಿ ಯಶ್ ಕಾಣಿಸಿಕೊಂಡಿರುವ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೇಳೆ, ಸೆಟ್‌ಗೆ ತೆರಳಿದ ಸಂದರ್ಭದಲ್ಲಿ ನಟಿ ರಾಧಿಕಾ ಪಂಡಿತ್‌ ಕೂಡ ಯಶ್‌ ಜೊತೆ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ನಟನ ಹೊಸ ಗೆಟಪ್‌ನಲ್ಲಿ ನೋಡಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.

ಅಂದಹಾಗೆ, ಟಾಕ್ಸಿಕ್‌ ಚಿತ್ರದ್ದೇ ನಾ? ಅಥವಾ ಜಾಹೀರಾತಿನ ಚಿತ್ರೀಕರಣದ್ದಾ? ಎಂದು ಚಿತ್ರತಂಡವೇ ತಿಳಿಸಬೇಕಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ತಿದ್ದಾರೆ. ನಯನತಾರಾ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನೂ ‘ಟಾಕ್ಸಿಕ್’ ಸಿನಿಮಾದ ಕೆಲಸದ ನಡುವೆ ‘ರಾಮಾಯಣ’ (Ramayana) ಸಿನಿಮಾದಲ್ಲೂ ಯಶ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಹ ನಿರ್ಮಾಪಕನಾಗಿಯೂ ಯಶ್ ಸಾಥ್ ನೀಡುತ್ತಿದ್ದಾರೆ.

Share This Article