70th National Film Award 2024: ಎರಡು ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ‘ಕೆಜಿಎಫ್‌ 2’ ಸಿನಿಮಾ

Public TV
1 Min Read
kgf 2 6
ಸಾಂದರ್ಭಿಕ ಚಿತ್ರ

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ (70th National Film Award 2024) ಕುರಿತು ದೆಹಲಿಯಲ್ಲಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆಯಿಂದ ಘೋಷಿಸಲಾಗಿದೆ. ಕನ್ನಡದ ‘ಕೆಜಿಎಫ್ 2’ (KGF 2) ಸಿನಿಮಾಗೆ 2 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ.

kgf 2

‘ಕೆಜಿಎಫ್‌ 2’ ಸಿನಿಮಾ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಮತ್ತು ಅತ್ಯುತ್ತಮ ಸಾಹಸ ನಿರ್ದೇಶನ (ಸ್ಟಂಟ್‌ ಕೊರಿಯೋಗ್ರಫಿ) ವಿಭಾಗಗಳಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಕೆಜಿಎಫ್‌ 2  ಚಿತ್ರಕ್ಕೆ ಎರಡು ಪ್ರಶಸ್ತಿಗಳು ಲಭಿಸಿವೆ.

ಅಂದಹಾಗೆ, 2020ನೇ ವರ್ಷದಲ್ಲಿ ಸೆನ್ಸಾರ್ ಆದ ಸಿನಿಮಾಗಳಿಗೆ ಇಂದು (ಆ.16) ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದೆ. ಕಾಂತಾರ ಸಿನಿಮಾ, ಕೆಜಿಎಫ್‌ 2 ಸಿನಿಮಾ, ಮಧ್ಯಂತರ ಎಂಬ ಚಿತ್ರ ಸೇರಿ ಒಟ್ಟು 7 ರಾಷ್ಟ್ರೀಯ ಪ್ರಶಸ್ತಿಗಳು ಬಾಚಿಕೊಂಡಿವೆ.

Share This Article