ಕೆಜಿಎಫ್ 2 ಕುರಿತಾದ ಪಬ್ಲಿಕ್ ಟಿವಿಯ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ಹಲವು ರಸವತ್ತಾದ ಘಟನೆಗಳು ಜರುಗಿದವು. ಈಗಾಗಲೇ ಕೆಜಿಎಫ್ 2 ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅಲ್ಲಿ ಯಶ್ ಹೊಡೆದ ಡೈಲಾಗ್ ಸಖತ್ ವೈರಲ್ ಆಗಿತ್ತು. ಬೆಂಕಿ ಉಗುಳುವ ಕಣ್ಣಿನೊಂದಿಗೆ ಎಂಟ್ರಿ ಕೊಡುವ ಯಶ್, ‘ವೈಲೆನ್ಸ್.. ವೈಲೆನ್ಸ್.. ಐ ಡೋಂಟ್ ಲೈಕ್ ವೈಲೆನ್ಸ್, ಬಟ್ ವೈಲೆನ್ಸ್ ಲೈಕ್ಸ್ ಮಿ’ ಎಂದು ಜಭರ್ದಸ್ತಾದ ಡೈಲಾಗ್ ಬಿಡ್ತಾರೆ. ಈ ಸಂಭಾಷಣೆಯನ್ನು ನಿರೂಪಕ ಅಕುಲ್ ಬಾಲಾಜಿ, ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಅವರ ಶೈಲಿಯಲ್ಲಿ ಹೇಳಿದರೆ ಹೇಗಿರುತ್ತದೆ ಎಂದು ಯಶ್ ಕೇಳುತ್ತಾರೆ. ಕ್ಷಣ ಹೊತ್ತು ಯೋಚಿಸದೇ ಯಶ್ ಅವರು ರಂಗನಾಥ್ ಅವರ ಶೈಲಿಯಲ್ಲೇ ಡೈಲಾಗ್ ಹೊಡೆಯುತ್ತಾರೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್
ಈ ಸಂಭಾಷಣೆ ಅಷ್ಟೆಕ್ಕೆ ಮುಗಿಯುವುದಿಲ್ಲ. ಯಶ್ ಹೇಳಿದ ಡೈಲಾಗ್ ಅನ್ನು ರಂಗನಾಥ್ ಅವರಿಂದಲೂ ಹೇಳಿಸುವ ಪ್ರಯತ್ನ ಮಾಡುತ್ತಾರೆ ಅಕುಲ್ ಬಾಲಾಜಿ. ಸಖತ್ತಾಗಿ ‘ವೈಲೆನ್ಸ್.. ವೈಲೆನ್ಸ್.. ಡೈಲಾಗ್ ಹೇಳಿ ನೋಡುಗರನ್ನು ರಂಜಿಸುತ್ತಾರೆ ರಂಗನಾಥ್. ಈ ಮಾತುಕತೆಯಲ್ಲಿ ರಂಗನಾಥ್ ಮತ್ತು ಯಶ್ ನಡೆದು ಬಂದ ಹಾದಿಯ ಕುರಿತು ಚರ್ಚೆ ಆಗುತ್ತದೆ. ಇಬ್ಬರಲ್ಲೂ ಸಾಮಿಪ್ಯ ಇರುವಂತಹ ಹಲವು ಘಟನೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಯಶಸ್ಸಿಗೆ ಶ್ರಮವೇ ಮುಖ್ಯ ಎಂದು ಉದಾಹರಣೆ ಕೊಡುವ ಮೂಲಕ ಮತ್ತೆ ಕೆಜಿಎಫ್ 2 ಸಿನಿಮಾದತ್ತ ಸಂದರ್ಶನ ಮುಂದುವರೆಯುತ್ತದೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್
ಕೆಜಿಎಫ್ 2 ಸಿನಿಮಾದ ಕುರಿತಾಗಿ ಇದೇ ಮೊದಲ ಬಾರಿಗೆ ನಟ ಯಶ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ. ಸಿನಿಮಾದ ಮೇಕಿಂಗ್, ಅದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಸಂಗತಿ ಮತ್ತು ಚಿತ್ರತಂಡದೊಂದಿಗಿನ ಹಲವು ವಿಚಾರಗಳನ್ನು ಈ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ, ತಮ್ಮ ಬದುಕಿನ ವೈಯಕ್ತಿಕ ವಿಚಾರಗಳನ್ನೂ ಹೇಳಿಕೊಂಡಿಕೊಂಡಿದ್ದಾರೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್
ಏಪ್ರಿಲ್ 14 ರಂದು ವಿಶ್ವದ್ಯಾಂತ ಎಂಟು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲಾಗಿದೆ. ಹಲವು ಕಡೆ ವಾರಪೂರ್ತಿ ಟಿಕೆಟ್ ಮಾರಾಟವಾಗಿದೆ. ಅಲ್ಲದೇ, ವಿದೇಶಗಳಲ್ಲೂ ಕೂಡ ದಾಖಲೆಯ ರೀತಿಯಲ್ಲಿ ಮುಂಗಡ ಬುಕ್ಕಿಂಗ್ ಆಗುತ್ತಿರುವುದು ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಬಲ ಬಂದಿದೆ.