ಮೈಸೂರು: ನಗರದ ಕೆ.ಆರ್. ವೃತ್ತದ ಬಳಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಸಿಡಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಯಶ್ ಅಭಿಮಾನಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೆಜಿಎಫ್ ಚಿತ್ರ ರಾಜ್ಯ ಸೇರಿದಂತೆ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಆದರೆ ಈ ಚಿತ್ರಕ್ಕೂ ಪೈರಸಿ ಕಾಟ ಉಂಟಾಗಿದ್ದು, ನಗರದ ಕೆ.ಆರ್. ವೃತ್ತದಲ್ಲಿ ವ್ಯಕ್ತಿಯೊಬ್ಬ ಕೆಜಿಎಫ್ ಸಿನಿಮಾದ ಸಿಡಿಗಳನ್ನು ಮಾರಾಟ ಮಾಡುತ್ತಿದ್ದ. ಈ ವಿಚಾರದ ತಿಳಿದ ಯಶ್ ಅಭಿಮಾನಿಗಳು ಸಿಡಿ ಮಾರುತ್ತಿದ್ದ ವ್ಯಕ್ತಿಯನ್ನು ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
Advertisement
Advertisement
ಕೆಜಿಎಫ್ ಸಿನಿಮಾದ ಸಿಡಿಗಳ ಸಮೇತ ದೇವರಾಜುನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯಶ್ ಅಭಿಮಾನಿಗಳು ಈ ಬಗ್ಗೆ ಮೈಸೂರಿನಾದ್ಯಂತ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಂಗಮ್ ಟಾಕೀಸ್ ರಸ್ತೆ, ಕೆ.ಟಿ.ಸ್ಟ್ರೀಟ್, ಮಂಡಿ ಮೊಹಲ್ಲಾ, ಅಗ್ರಹಾರ ಸೇರಿದಂತೆ ಹಲವು ಕಡೆ ಕೆಜಿಎಫ್ ಸಿನಿಮಾದ ಸಿಡಿಗಳು ಮಾರಾಟವಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
Advertisement
ಕೆಜಿಎಫ್ ಸಿನಿಮಾದ ಸಿಡಿಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ನಿರ್ಮಾಣ ಮಾಡಿರುವ ಹೊಂಬಾಳೆ ಸಿನಿಮಾಸ್ ಅವರು ಎಚ್ಚರಿಕೆ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv