ಕಲಬುರಗಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆ ದಿನದ ನೆನಪಿಗಾಗಿ ಅವರ ಅಭಿಮಾನಿಯೋರ್ವ ಬೈಕ್ ಖರೀದಿಸಿ ಚಿತ್ರಮಂದಿರದ ಮುಂದೆಯೇ ಪೂಜೆ ಮಾಡಿ ಖುಷಿ ಪಟ್ಟಿದ್ದಾನೆ.
ಶಹಬಜಾರ ನಿವಾಸಿಯಾದ ಮಹೇಶ್ ಹಲವು ವರ್ಷಗಳಿಂದ ಯಶ್ ಅಭಿಮಾನಿಯಾಗಿದ್ದು, ಇಂದು ಕೆಜಿಎಫ್ ಚಿತ್ರ ಬಿಡುಗಡೆಯ ನೆನಪಿಗಾಗಿ ಬಜಾಜ್ ಪಲ್ಸಾರ್ ಎನ್‍ಎಸ್ 160 ಬೈಕ್ ಖರೀದಿಸಿದ್ದಾರೆ.
ಅಷ್ಟೇ ಅಲ್ಲದೆ ಬೆಳ್ಳಂಬೆಳಗ್ಗೆ ಹೊಸ ಬೈಕನ್ನು ನೇರವಾಗಿ ಶೆಟ್ಟಿ ಮಲ್ಟಿಪ್ಲೆಕ್ಸ್‍ಗೆ ತಂದು ಚಿತ್ರಮಂದಿರದ ಮುಂದೆಯೇ ಪೂಜೆ ಮಾಡಿದ್ದಾರೆ. ಬೈಕ್ ಪೂಜೆ ಮಾಡಿದ ಬಳಿಕ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದ ಜನರಿಗೆ ಸಿಹಿ ವಿತರಿಸಿ ಸಂತೋಷ ಹಂಚಿ ಸಿನಿಮಾ ನೋಡಲು ಹೋಗಿದ್ದಾರೆ.
ಕಲಬುರಗಿಯ ಶೆಟ್ಟಿ ಮಲ್ಟಿಪ್ಲೇಕ್ಸ್, ಮುಕ್ತಾ ಸಿನಿಮಾಸ್, ಮಿರಜ್ ಸಿನಿಮಾಸ್ ಥಿಯೇಟರ್‍ಗಳಲ್ಲಿ ಕೆಜಿಎಫ್ ಚಿತ್ರ ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದ ಯಶ್ ಅಭಿಮಾನಿಗಳು ಇಂದು ಹಬ್ಬ ಆಚರಿಸುತ್ತಿರುವುದಂತು ಸತ್ಯ. ವಿರೋಧಗಳ ನಡುವೆಯೇ ಭರ್ಜರಿಯಾಗಿ ಕೆಜಿಎಫ್ ಚಿತ್ರ ಬಿಡುಗಡೆ ಆಗಿದ್ದು, ಚಿತ್ರ ವೀಕ್ಷಿಸಿ ಅಭಿಮಾನಿಗಳು `ಸಲಾಂ ರಾಕಿ ಬಾಯ್’ ಎಂದು ಹೇಳಿ ಯಶ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv