ಬೆಂಗಳೂರು: ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಸಿನಿಮಾ ಭಾರತದಾದ್ಯಂತ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ ಅಂದಾಜು 30 ಕೋಟಿ ಗಳಿಸಿರುವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂಬಂಧ ಯಶ್ ಇಂದು ಫೇಸ್‍ಬುಕ್ ಲೈವ್ ಬಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.
ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದರಿಂದ ಎಲ್ಲ ರಾಜ್ಯದ ಅಭಿಮಾನಿಗಳು ಮಾತೃಭಾಷೆಯಲ್ಲಿ ಪ್ರಶ್ನೆ ಕೇಳುತ್ತಿದ್ದರು. ಯಶ್ ಸಹ ಅವರ ಭಾಷೆಯಲ್ಲಿ ಪ್ರಯತ್ನ ಮಾಡಿದರು. ಸಿನಿಮಾ ಪೈರೆಸಿ ಮಾಡದೇ ಚಿತ್ರಮಂದಿರಗಳಲ್ಲಿಯೇ ನೋಡಿ. ಪೈರೆಸಿ ತಡೆಯಲು ಒಂದು ಟೀಂ ರಚನೆಯಾಗಿದೆ. ಆನ್‍ಲೈನ್ ಬರುವ ಪೈರೆಸಿ ವಿಡಿಯೋಗಳನ್ನು ಅಲ್ಲಿಯೇ ಕಟ್ ಮಾಡಲಾಗುತ್ತಿದೆ ಎಂದು ಹೇಳಿದರು.
Advertisement
Advertisement
ಚಿತ್ರಮಂದಿರಗಳ ಸಂಭ್ರಮಿಸುವಾಗ ಎತ್ತರದ ಸ್ಥಳದಲ್ಲಿ ನಿಂತು ಫೋಟೋ ತೆಗೆದುಕೊಳ್ಳಬೇಡಿ. ಕಟೌಟ್ ಮೇಲೆ ಹೋಗಿ ಹಾಲು, ಹಾರ ಹಾಕುವಾಗ ಎಚ್ಚರಿಕೆ ಇರಲಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದರು. ಸಿನಿಮಾ ಮಾಡಿ ನಿಮ್ಮ ಮುಂದೆ ಇಟ್ಟಿದ್ದು, ನೀವು ಅದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ನಿಮ್ಮ ಸಿನಿಮಾ ಅಂತಾ ಅಪ್ಪಿಕೊಂಡು ಆಶೀರ್ವಾದ ನೀಡಿದ್ದೀರಿ. ಸಿನಿಮಾಗಾಗಿ ಕೆಲಸ ಮಾಡಿದ ಎಲ್ಲ ವಿತರಕರಿಗೂ, ಚಿತ್ರ ಕಲಾವಿದರು ಮತ್ತು ತಂತ್ರಜ್ಞರಿಗೂ ಧನ್ಯವಾದ ತಿಳಿಸಿದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv