ತಮಿಳಿನ (Tamil) ನಟ ಜೈ ಆಕಾಶ್ (Jai Akash) ಮಾತನಾಡಿದ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ, ಯಶ್ (Yash) ತಮ್ಮ ಬಳಿ ಅವಕಾಶಕ್ಕಾಗಿ ಕಣ್ಣೀರು ಹಾಕಿದ್ದರು. ಅವರಿಗೆ ನಾನು ಹೊಟ್ಟೆ ತುಂಬಾ ಊಟ ಹಾಕಿದ್ದೆ. ಇದೀಗ ಯಶ್ ಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ ಎಂದು ಜೈ ಆಕಾಶ್ ಹೇಳಿದ್ದಾರೆ. ಆದರೆ, ಅದನ್ನು ಯಶ್ ಅಭಿಮಾನಿಗಳು ನಂಬಲು ತಯಾರಿಲ್ಲ.
ಜೈ ಆಕಾಶ್ ಅವರ ವಿಡಿಯೋ ವೈರಲ್ ಆಗಿದ್ದರೂ, ಈ ಕುರಿತಾಗಿ ಯಶ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಸಲಿಯಾಗಿ ತಮಿಳು ನಟನ ಬಳಿ ಯಶ್ ಯಾವ ಕಾರಣಕ್ಕಾಗಿ ಸಹಾಯ ಕೇಳಿದರು ಎನ್ನುವುದು ಗೊತ್ತಿಲ್ಲ. ಇದು ಯಾವ ಸಂದರ್ಭದಲ್ಲಿ ಆಗಿದ್ದು ಎಂದು ಆ ನಟನೂ ಹೇಳಿಕೊಂಡಿಲ್ಲ.
ಕೆಜಿಎಫ್ ಸಿನಿಮಾದ ನಂತರ ಯಶ್ ಭಾರತದ ನಟನಾಗಿ ರೂಪುಗೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಹಾಗಾಗಿ ಪ್ರಚಾರಕ್ಕಾಗಿ ಹಾಗೇನಾದರೂ ಜೈ ಆಕಾಶ್ ಮಾತನಾಡಿದ್ದಾರಾ ಗೊತ್ತಿಲ್ಲ. ಇಂತಹ ವಿಷಯಗಳು ಸುದ್ದಿಯಾದಾಗ ಎರಡೂ ಕಡೆಯಿಂದ ನಿಜಾಂಶ ತಿಳಿಬೇಕು. ಈ ವಿಷಯದಲ್ಲಿ ಯಶ್ ಏನು ಹೇಳುತ್ತಾರೋ ನೋಡೋಣ.
Web Stories