‘ಟಾಕ್ಸಿಕ್’ (Toxic) ಸಿನಿಮಾ ಬೆನ್ನಲ್ಲೇ ಯಶ್ (Yash) ಮತ್ತೊಂದು ಬಾಲಿವುಡ್ (Bollywood) ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರಾ? ಹೀಗೊಂದು ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ. ಈಗಾಗಲೇ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ಇದೊಂದು ಸುದ್ದಿ ಹಬ್ಬಿದೆ. ಯಾವುದು ಸಿನಿಮಾ? ನಿರ್ಮಾಪಕರು ಯಾರು? ನಿಜಕ್ಕೂ ಇನ್ನೊಂದು ಬಾಲಿವುಡ್ ಸಿನಿಮಾ ಯಶ್ ಮಾಡುತ್ತಾರಾ? ಇಲ್ಲಿದೆ ಮಾಹಿತಿ.
ಯಶ್ ಈಗ ಎಲ್ಲಾ ಭಾಷೆಗಳಲ್ಲೂ ಸಲ್ಲುತ್ತಿದ್ದಾರೆ. ಅದಕ್ಕೆ ಕಾರಣ ಕೆಜಿಎಫ್. ಈಗಾಗಲೇ ‘ಟಾಕ್ಸಿಕ್’ ಸಿನಿಮಾಗೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಸಿನಿಮಾ ಶೂಟಿಂಗ್ ಆರಂಭ ಇನ್ನೇನು ಹತ್ತಿರದಲ್ಲಿದೆ. ಅದಕ್ಕೆ ಏನೇನು ಬೇಕು ಎಲ್ಲವನ್ನು ಸಜ್ಜು ಮಾಡಿಕೊಂಡಿದ್ದಾರೆ ಯಶ್ & ಟೀಮ್. ಈ ಹೊತ್ತಲ್ಲೇ ಇಲ್ಲೊಂದು ಸುದ್ದಿ ಹರಿದಾಡುತ್ತಿದೆ. ಬಾಲಿವುಡ್‌ನ ಮತ್ತೊಂದು ಸಿನಿಮಾದಲ್ಲಿ ಯಶ್ ನಟಿಸಲು ಒಪ್ಪಿದ್ದಾರೆ. ಅದಕ್ಕಾಗಿ ಮಾತು ಕತೆ ಕೂಡ ನಡೆದಿದೆ ಎನ್ನಲಾಗಿದೆ. ಆ ನಿರ್ಮಾಣ ಸಂಸ್ತೆಯೇ ಶಾರುಖ್ ಖಾನ್ (Sharukh Khan) ಒಡೆತನದ ರೆಡ್ ಚಿಲ್ಲೀಸ್. ಇದನ್ನೂ ಓದಿ:ಒಂದೇ ಸಿನಿಮಾದಲ್ಲಿ ಸುದೀಪ್-ವಿನಯ್ ಗೌಡ? ಕಿಚ್ಚ ಏನಂದ್ರು?
‘ರೆಡ್ ಚಿಲ್ಲೀಸ್’ ಹೊಸ ಪ್ರಾಜೆಕ್ಟ್‌ನಲ್ಲಿ ಯಶ್ ನಟಿಸುತ್ತಿದ್ದಾರೆ ಎನ್ನುವುದು ಇದರ ಹಿನ್ನೆಲೆ. ಆದರೆ ಅದು ಯಾವ ಪಾತ್ರ? ನಿರ್ದೇಶಕ ಯಾರು? ಈ ಎಲ್ಲ ವಿವರ ಸಿಗುತ್ತಿಲ್ಲ. ಜಸ್ಟ್ ಮಾತು ಕತೆ ಆಗಿದೆ ಅಷ್ಟೇ. ಹಾಗಂತ ಬಾಲಿವುಡ್ ಅಂಗಳದಲ್ಲಿ ಸುದ್ದಿ ಬಂದಿದೆ. ಈಗಾಗಲೇ ನಿತಿಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ರಾವಣನ ಪಾತ್ರ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಭರ್ಜರಿ ಸಂಭಾವನೆ ಪಡೆದಿದ್ದಾರೆ. ಈಗ ನೋಡಿದರೆ ಇನ್ನೊಂದು ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಹಬ್ಬಿದೆ. ಇದು ನಿಜವಾ? ಹೀಗಂತ ಯಶ್ ಆಪ್ತರನ್ನು ಕೇಳಿದರೆ ಅವರು ನೋ ಚಾನ್ಸ್ ಎನ್ನುತ್ತಿದ್ದಾರೆ.
ಸದ್ಯಕ್ಕೆ ‘ಟಾಕ್ಸಿಕ್’ ಸಿನಿಮಾದತ್ತ ಗಮನ ಕೊಡ್ತಿದ್ದಾರೆ. ಅದು ಗ್ಲೋಬಲ್ ಲೆವೆಲ್ ಸಿನಿಮಾ. ಅದಕ್ಕಾಗಿ ಹೆಚ್ಚು ಕಮ್ಮಿ 3 ವರ್ಷ ಕಾದಿದ್ದಾರೆ. ಸಾಕಷ್ಟು ಕತೆಗಳನ್ನು ಕೇಳಿ ಕೊನೆಗೆ ಗೀತು ಮೋಹನ್‌ದಾಸ್‌ಗೆ ನಿರ್ದೇಶನದ ಜವಾಬ್ದಾರಿ ಕೊಟ್ಟಿದ್ದಾರೆ. ಗೀತು ಕೂಡ ಅಂಥದ್ದೊಂದು ಕತೆ ಹೆಣೆದಿದ್ದಾರೆ. ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಹೀಗಾಗಿ ಇನ್ನೊಂದು ಬಾಲಿವುಡ್ ಸಿನಿಮಾ ಮಾಡೋದು ಅನುಮಾನ ಎನ್ನಲಾಗುತ್ತಿದೆ.