ನಾಡಿನ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ (Hombale Films) ಮತ್ತು ಯಶ್ (Yash) ನಡುವೆ ಸಂಬಂಧ ಹಳಸಿದೆ ಎಂದೆಲ್ಲ ರೂಮರ್ ಹರಿಬಿಡಲಾಗಿತ್ತು. ಯಶ್ ಮತ್ತು ಹೊಂಬಾಳೆ ಸಂಸ್ಥೆಯು ಬಾಂಧವ್ಯ ಚೆನ್ನಾಗಿದ್ದರೂ, ಅದಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿತ್ತು. ಅಂತವರಿಗೆ ಸರಿಯಾದ ರೀತಿಯಲ್ಲಿ ಚಾಟಿ ಏಟು ಬೀಸಿದ್ದಾರೆ ಯಶ್ ಮತ್ತು ಹೊಂಬಾಳೆ ಸಂಸ್ಥೆ. ತಮ್ಮ ನಡುವೆ ಉತ್ತಮ ಬಾಂಧವ್ಯ ಇರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರಚುರ ಪಡಿಸಿದೆ.
Advertisement
ಯಶ್ ಅವರ ಹೊಸ ಸಿನಿಮಾ ಟಾಕ್ಸಿಕ್ ಗೆ ಶುಭ ಕೋರಿ ಹೊಂಬಾಳೆ ಫಿಲ್ಮ್ಸ್ ಎಕ್ಸ್ (ಟ್ವೀಟ್) ಮಾಡಿದ್ದರೆ, ಪ್ರತಿಯಾಗಿ ಯಶ್ ಕೂಡ ಕಾಂತಾರ ಚಾಪ್ಟರ್ 1 (Kantara Chapter 1) ಮತ್ತು ಸಲಾರ್ ಸಿನಿಮಾ ಕುರಿತಾಗಿ ಅಭಿನಂದನೆ ತಿಳಿಸಿದ್ದಾರೆ. ಎರಡೂ ಸಿನಿಮಾಗಳಿಗಾಗಿ ತಾವು ಕಾಯುತ್ತಿರುವುದಾಗಿ ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳಿಗೆ ಸಖತ್ ಉತ್ತರವನ್ನೇ ಕೊಟ್ಟಿದ್ದಾರೆ.
Advertisement
Advertisement
ಸಲಾರ್ ಗೆ ಸೆನ್ಸಾರ್
Advertisement
ಬಹುನಿರೀಕ್ಷಿತ ಸಲಾರ್ ಸಿನಿಮಾವನ್ನು ಕೇವಲ ಯಶ್ ಮಾತ್ರ ಕಾಯುತ್ತಿಲ್ಲ, ಕೋಟ್ಯಂತರ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಈ ನಡುವೆ ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ (Censor) ಮಂಡಳಿಯ ಪ್ರಮಾಣ ಪತ್ರವನ್ನು ನೀಡಿದ್ದು, ತೀವ್ರಗತಿಯ ಸಾಹಸ ಸನ್ನಿವೇಶಗಳು ಇರುವ ಕಾರಣದಿಂದಾಗಿ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಭಾರತದಲ್ಲಿನ ಪ್ರದರ್ಶನಕ್ಕಾಗಿ ‘ಎ’ ಮತ್ತು ಹೊರ ದೇಶದಲ್ಲಿನ ಪ್ರದರ್ಶನಕ್ಕಾಗಿ ಯು/ಎ ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟ್ಟು ಅವಧಿ 2 ಗಂಟೆ 55 ನಿಮಿಷ ಎಂದು ಹೇಳಲಾಗುತ್ತಿದೆ.
ನಾನಾ ಕಾರಣಗಳಿಂದಾಗಿ ಸಿನಿಮಾ ಕುತೂಹಲ ಮೂಡಿಸಿದೆ. ಡಾರ್ಲಿಂಗ್ ಪ್ರಭಾಸ್ (Prabhas) ನಾಯಕತ್ವದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊನ್ನೆಯಷ್ಟೇ ‘ಸಲಾರ್’ (Salaar) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಫ್ರೆಂಡ್ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ಟ್ರೈಲರ್ ನೋಡಿದಾಗಲೇ ಚಿತ್ರಕ್ಕೆ ಯಾವ ಪ್ರಮಾಣ ಪತ್ರ ಸಿಗಬಹುದು ಎಂದು ಅಂದಾಜಿಸಲಾಗಿತ್ತು.
ಹೊಂಬಾಳೆ ಸಂಸ್ಥೆ ನಿರ್ಮಾಣದ ಸಲಾರ್ ಚಿತ್ರದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಜುಗಲ್ಬಂದಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಪ್ರಭಾಸ್ ಖಡಕ್ ಲುಕ್, ಪೃಥ್ವಿರಾಜ್ ರಗಡ್ ಡೈಲಾಗ್ ಎಲ್ಲವೂ ಟ್ರೈಲರ್ನ ಹೈಲೈಟ್ ಆಗಿದೆ. ಚಿತ್ರದಲ್ಲಿ ಕನ್ನಡದ ಗುಳ್ಟು ನವೀನ್ ಶಂಕರ್, ಪ್ರಮೋದ್, ಜಗಪತಿ ಬಾಬು, ಶ್ರುತಿ ಹಾಸನ್ ಸೇರಿದಂತೆ ಅನೇಕರು ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಡಿಸೆಂಬರ್ 22ಕ್ಕೆ ಬಹುಭಾಷೆಗಳಲ್ಲಿ ‘ಸಲಾರ್’ ರಿಲೀಸ್ ಆಗುತ್ತಿದೆ.