ರಾಕಿಂಗ್ ಸ್ಟಾರ್ ಯಶ್ (Yash) ಪದೇ ಪದೇ ಮುಂಬೈನಲ್ಲಿ (Mumbai) ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಆಪ್ತರ ಪ್ರಕಾರ ಮುಂಬೈನಲ್ಲೇ ಅವರ ಹೊಸ ಸಿನಿಮಾದ ಕೆಲವು ಕೆಲಸಗಳು ನಡೆಯುತ್ತಿವೆಯಂತೆ. ಹಾಗಾಗಿ ಅವರು ಪದೇ ಪದೇ ಮುಂಬೈ ಫ್ಲೈಟ್ ಏರುತ್ತಿದ್ದಾರೆ. ಈಗಾಗಲೇ ಬಾಲಿವುಡ್ (Bollywood) ಬೆರಗಾಗುವಂತಹ ಸಿನಿಮಾ ಕೊಟ್ಟಿರುವ ಯಶ್, ಮುಂದಿನ ಟಾರ್ಗೆಟ್ ಹಾಲಿವುಡ್ (Hollywood) ಅಂದುಕೊಂಡಿದ್ದಾರೆ. ಹಾಗಾಗಿ ಜಾಗತಿಕ ಮಟ್ಟದ ಸಿನಿಮಾವನ್ನು ಅವರು ಕೈಗೆತ್ತಿಕೊಂಡಿದ್ದಾರಂತೆ.
ಈ ಬಾರಿಯ ಸಿನಿಮಾದ ಬಜೆಟ್ ಮತ್ತು ಮೇಕಿಂಗ್ ಕೆಜಿಎಫ್ (KGF) ಸಿನಿಮಾಗಿಂತಲೂ ಇನ್ನೂ ಅದ್ಧೂರಿಯಾಗಿ ಇರಲಿದೆಯಂತೆ. ಅಲ್ಲದೇ, ಯುದ್ಧಗಳು ಸೇರಿದಂತೆ ಹಲವು ಅಚ್ಚರಿಯ ಸಂಗತಿಗಳನ್ನು ಒಳಗೊಂಡಿರುವ ಸಿನಿಮಾ ಅದಾಗಿದೆಯಂತೆ. ಈ ಕಾರಣಕ್ಕಾಗಿಯೇ ಹಾಲಿವುಡ್ ತಂತ್ರಜ್ಞರನ್ನೂ ಯಶ್ ಭೇಟಿ ಮಾಡಿದ್ದಾರೆ. ಸಿನಿಮಾದ ತಯಾರಿ ಕುರಿತಂತೆ ಹಲವು ರೀತಿಯಲ್ಲಿ ಚರ್ಚೆಯನ್ನೂ ಅವರು ಮಾಡಿದ್ದಾರಂತೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ
ಯಶ್ ಮುಂದಿನ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಮಾಡಲಿದೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ಯಾವುದೇ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಹಾಗಂತ ಕೆವಿಎನ್ ಸಂಸ್ಥೆಯೇ ಯಶ್ ಮುಂದಿನ ಸಿನಿಮಾ ಮಾಡಲಿದೆ ಎನ್ನುವುದು ಪಕ್ಕಾ ಕೂಡ ಆಗಿಲ್ಲ. ಈ ನಡುವೆ ಜಗತ್ತಿನ ಹೆಸರಾಂತ ತಂತ್ರಜ್ಞರನ್ನು ಯಶ್ ಭೇಟಿ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರೆಲ್ಲರೂ ಒಂದಾಗಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k