ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಟ್ವಿಟ್ಟರಿನಲ್ಲಿ ಪತ್ನಿ, ನಟಿ ರಾಧಿಕಾ ಪಂಡಿತ್ ಹಾಗೂ ಮಗಳು ಐರಾ ಫೋಟೋ ಹಾಕುವ ಮೂಲಕ ವಿಭಿನ್ನವಾಗಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಯಶ್ ತಮ್ಮ ಮಗಳು ಐರಾಗೆ ಮುತ್ತು ನೀಡುತ್ತಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ, “ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಎಂದು ಯೋಚ್ನೆ ಮಾಡ್ತಾ ಇದ್ದೀನಿ?”. ನಿಮ್ಮ ಈ ಪುಟ್ಟ ಗೌರಿಯಿಂದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.
Advertisement
Wondering if my Dad will have more modakas than me ???? Anyway.. wishing u all a very Happy Ganesha Habba from your putta Gowri ????
ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ???? ..
ನಿಮ್ಮ ಈ ಪುಟ್ಟ ಗೌರಿಯಿಂದ
ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು pic.twitter.com/BmgphbR8VT
— Yash (@TheNameIsYash) September 2, 2019
Advertisement
ಇತ್ತ ನಟಿ ರಾಧಿಕಾ ಪಂಡಿತ್ ಐರಾಳನ್ನು ತೊಡೆ ಮೇಲೆ ಕೂರಿಸಿಕೊಂಡಿರುವ ಫೋಟೋ ಹಾಗೂ ಐರಾಳ ಸಿಂಗಲ್ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು. ನಮ್ಮನೆಯ ಪುಟ್ಟ ಗೌರಿ ಕಡೆಯಿಂದ” ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಈ ಹಿಂದೆ ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಯಶ್, ರಾಧಿಕಾ ಮಗಳ ಜೊತೆಗಿರುವ ಫೋಟೋ ಹಾಕಿ, “ನಮ್ಮ ಮನೆಯ ಪುಟ್ಟ ಲಕ್ಷ್ಮಿ ಕಡೆಯಿಂದ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಸಹಜ ಸ್ಥಿತಿಯತ್ತ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ” ಎಂದು ಹಬ್ಬಕ್ಕೆ ಶುಭ ಕೋರಿದ್ದರು.
ಬಳಿಕ ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಕೂಡ ಯಶ್ ಹಾಗೂ ರಾಧಿಕಾ ತಮ್ಮ ಮಗಳು ಐರಾಗೆ ಕೃಷ್ಣನ ಉಡುಪು ಹಾಕಿರುವ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ಆ ಫೋಟೋ ಹಾಕಿ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ತಿಳಿಸಿದ್ದರು.
ಯಶ್ ಸೇರಿದಂತೆ ಸ್ಯಾಂಡಲ್ವುಡ್ ನಟರಾದ ದರ್ಶನ್, ಉಪೇಂದ್ರ, ಪುನೀತ್ ರಾಜ್ಕುಮಾರ್ ಎಲ್ಲರೂ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಗೌರಿ-ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ.