ಅಭಿಮಾನಿಗಳು ಸೂಚಿಸಿದ ಹೆಸರನ್ನೇ ಮಗ್ಳಿಗೆ ಇಡಲಿದ್ದಾರೆ ರಾಕಿಂಗ್ ಜೋಡಿ

Public TV
1 Min Read
yash and radhika pandit baby

ಬೆಂಗಳೂರು: ರಾಕಿಂಗ್ ಕಪಲ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೀವನದಲ್ಲಿ ಮುದ್ದಾದ ಹೆಣ್ಣು ಮಗು ಎಂಟ್ರಿ ಕೊಟ್ಟು ಮೂರು ತಿಂಗಳಾಗಿದೆ. ಮೂರು ತಿಂಗಳಾದರೂ ಯಶ್ ಹಾಗೂ ರಾಧಿಕಾ ತಮ್ಮ ಮಗಳ ನಾಮಕರಣವನ್ನು ಮಾಡಲಿಲ್ಲ. ಈಗ ಅಭಿಮಾನಿಗಳು ಸೂಚಿಸಿದ ಹೆಸರನ್ನೇ ತಮ್ಮ ಮಗಳಿಗೆ ನಾಮಕರಣ ಮಾಡುತ್ತಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಹೆಣ್ಣು ಮಗುವಿಗೆ ತಂದೆ-ತಾಯಿ ಆಗಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮಗಳಿಗೆ ಹೆಸರು ಸೂಚಿಸಲು ಪ್ರಾರಂಭಿಸಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳಿಗೆ ‘ಯಶಿಕಾ’ ಎಂದು ಹೆಸರಿಡಬೇಕೆಂದು ಅಭಿಮಾನಿಗಳು ಸೂಚಿಸಿದ್ದರು.

YASH BABY copy

ಯಶ್ ಹಾಗೂ ರಾಧಿಕಾ ಇಬ್ಬರ ಹೆಸರು ಸೇರಿಸಿ ‘ಯಶಿಕಾ’ ಎಂದು ಹೆಸರಿಡಲು ಅಭಿಮಾನಿಗಳು ಸ್ಟಾರ್ ಜೋಡಿ ಬಳಿ ಮನವಿ ಮಾಡಿಕೊಂಡಿದ್ದರು. ಈಗ ಈ ಹೆಸರೇ ತಮ್ಮ ಮಗಳಿಗೆ ನಾಮಕರಣ ಮಾಡಲು ಯಶ್ ಒಪ್ಪಿಕೊಂಡಿದ್ದಾರೆ. ಸದ್ಯ ಮಗುವಿಗೆ ಈಗ ಮೂರು ತಿಂಗಳಾಗಿದ್ದು, 5ನೇ ತಿಂಗಳಿನಲ್ಲಿ ನಾಮಕರಣ ಮಾಡಲಿದ್ದಾರೆ.

Yash Baby

ಈ ಬಗ್ಗೆ ಸ್ವತಃ ರಾಧಿಕಾ ಪಂಡಿತ್ ಅವರು, “ನಮ್ಮ ಮಗಳಿಗೆ ಯಶಿಕಾ ಎಂದು ಹೆಸರಿಡಲು ನಿರ್ಧರಿಸಿದ್ದೇವೆ. ಅಲ್ಲದೇ ಮಗುವಿಗೆ 5ನೇ ತಿಂಗಳು ತುಂಬಿದ್ದಾಗ ನಾಮಕರಣ ಮಾಡಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

ಬಾಲಿವುಡ್ ಶಾಹಿದ್ ಕಪೂರ್ ಅವರು ಕೂಡ ತಮ್ಮ ಮೊದಲ ಮಗುವಿಗೆ ತನ್ನ ಹಾಗೂ ಪತ್ನಿ ಮೀರಾ ಹೆಸರು ಸೇರಿಸಿ ‘ಮಿಶಾ’ ಎಂದು ಹೆಸರಿಟ್ಟಿದ್ದರು. ಸ್ಟಾರ್ ಜೋಡಿಗಳಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅವರನ್ನು ವಿರುಷ್ಕಾ ಎಂದು ಕರೆದರೆ, ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್‍ನನ್ನು ದೀಪ್‍ವೀರ್ ಜೋಡಿ ಎಂದು ಕರೆಯಲಾಗುತ್ತದೆ.

https://www.youtube.com/watch?v=VxelNRK-5H0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *