ಅದ್ದೂರಿಯಾಗಿ ನಡೆಯಿತು ಯಶ್ ಪುತ್ರನ ಬರ್ತ್‌ಡೇ

Public TV
1 Min Read
radhika pandit 2

ನ್ಯಾಷನಲ್ ಸ್ಟಾರ್ ಯಶ್-ರಾಧಿಕಾ ಪಂಡಿತ್ (Radhika Pandit) ದಂಪತಿಯ ಪುತ್ರ ಯಥರ್ವ್ 4ನೇ ವರ್ಷದ ಹುಟ್ಟುಹಬ್ಬದ (ಅ.30) ಸಂಭ್ರಮವನ್ನು ಗ್ರ್ಯಾಂಡ್‌ ಆಗಿ ಆಚರಿಸಿದ್ದಾರೆ. ಬರ್ತ್‌ಡೇ ಸೆಲೆಬ್ರೇಶನ್ ಫೋಟೋವನ್ನು ನಟಿ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

yashಪುತ್ರಿ ಐರಾ ಮತ್ತು ಯಥರ್ವ್ ಹುಟ್ಟುಹಬ್ಬವನ್ನು ಪ್ರತಿ ವರ್ಷವೂ ಗ್ರ್ಯಾಂಡ್‌ ಸೆಲೆಬ್ರೇಟ್ ಮಾಡುತ್ತಾರೆ. ಎಂದಿನಂತೆ ಈ ವರ್ಷವೂ ಕೂಡ ಯಶ್ ಪುತ್ರನ ಬರ್ತ್‌ಡೇ ಅದ್ದೂರಿಯಾಗಿ ನಡೆದಿದೆ. ಮಗನ ಬರ್ತ್‌ಡೇಯಂದು ಮಕ್ಕಳ ಜೊತೆ ಯಶ್, ರಾಧಿಕಾ ಕೂಡ ಮಸ್ತ್ ಆಗಿ ಡ್ಯಾನ್ಸ್ ಸ್ಟೇಪ್ಸ್ ಹಾಕಿದ್ದಾರೆ.

ಖಾಸಗಿ ಹೋಟೆಲ್‌ವೊಂದರಲ್ಲಿ ಅದ್ದೂರಿ ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಬಾಲ ಹನುಮಾನ್ ಥೀಮ್‌ನಲ್ಲಿ ಸೆಲೆಬ್ರೇಶನ್ ನಡೆದಿದೆ. ಈ ಕಲರ್‌ಫುಲ್ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ದರು. ಇದನ್ನೂ ಓದಿ:ನನ್ನ ರಕ್ತಹೀರಿಕೊಂಡು ಬಿಟ್ಟಿದ್ದಾರೆ- ಸಂಗೀತಾಗೆ ರೇಗಿಸಿದ ಕಾರ್ತಿಕ್‌

ಇನ್ನೂ ‘ಯಶ್ 19’ (Yash 19) ಚಿತ್ರದ ಬಗ್ಗೆ ಇದುವರೆಗೂ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಒಂದೂವರೆ ವರ್ಷ ಕಳೆದರೂ ಯಶ್ (Actor Yash) ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಅದರ ತಯಾರಿಯಲ್ಲಿ ರಾಕಿ ಭಾಯ್ ಬ್ಯುಸಿಯಾಗಿದ್ದಾರೆ.

Share This Article