‘ಕೆಜಿಎಫ್ 2′ (KGF 2) ಹೀರೋ ಯಶ್-ರಾಧಿಕಾ ಪಂಡಿತ್ (Radhika Pandit) ಜೋಡಿ ಗ್ರ್ಯಾಂಡ್ ಆಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ-ಯಶ್ ಶೇರ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಸ್ಟಾರ್ ಜೋಡಿ ಯಶ್ (Yash) ದಂಪತಿ ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನ (ಆಗಸ್ಟ್ 25) ಅದ್ದೂರಿಯಾಗಿ ಆಚರಿಸಿದ್ದಾರೆ. ಲಕ್ಷ್ಮಿ ದೇವಿ ವಿಗ್ರಹಕ್ಕೆ ಅಲಂಕರಿಸಿ, ಪೂಜೆಯ ವಿಧಿ ವಿದಾನಗಳನ್ನ ಅಚ್ಚು ಕಟ್ಟಾಗಿ ಆಚರಿಸಿದ್ದಾರೆ. ಯಶ್ ಲೈಟ್ ಬಣ್ಣದ ಪಂಚೆ- ಶಲ್ಯ ಧರಿಸಿ ಮಿಂಚಿದ್ರೆ, ರಾಧಿಕಾ ಹಳದಿ ಬಣ್ಣದ ಸೀರೆ ನೇರಳೆ ಬಣ್ಣದ ಬಾರ್ಡರ್ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಮಕ್ಕಳಿಬ್ಬರು ಕೂಡ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.
ತಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಸರ್ವರ ಜೀವನದಲ್ಲೂ ಸಂತೋಷ, ಆರೋಗ್ಯ- ಅಂತ್ಯವಿಲ್ಲದ ಸಮೃದ್ಧಿಯನ್ನು ನೀಡಲಿ ಎಂದು ಯಶ್ ಜೋಡಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಮುಂದಿನ ತಿಂಗಳು ಪತ್ನಿಗೆ ಡೆಲಿವರಿ ಡೇಟ್- 2ನೇ ಮಗುವಿನ ಬಗ್ಗೆ ಧ್ರುವ ಪ್ರತಿಕ್ರಿಯೆ
ಈ ಫೋಟೋ ಶೇರ್ ಮಾಡ್ತಿದ್ದಂತೆ ಯಶ್ 19 9(Yash 19) ಅಪ್‌ಡೇಟ್ ಯಾವಾಗ ಅಣ್ಣ- ಅತ್ತಿಗೆ ಅಂತಾ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಗೋಗರೆದಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]