ಬೆಂಗಳೂರು: ಸ್ಯಾಂಡಲ್ವುಡ್ ರಾಕಿಂಗ್ ಜೋಡಿ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಮಗಳಿಗೆ ಇಂದು 8 ತಿಂಗಳು ತುಂಬಿದೆ. ಈ ಖುಷಿಯಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಗಳ ಜೊತೆಯಿರುವ ಕ್ಯೂಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಯಶ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಐರಾ ಜೊತೆಗೆ ಇರುವ ಫೋಟೋವನ್ನು ಹಾಕಿ, ಅದರ ಮೇಲೆ “ನಿಮ್ಮನ್ನು ನೀವು ಕೆಟ್ಟವರು ಎಂದು ತಿಳಿದುಕೊಂಡಿದ್ದರೆ, ನನ್ನ ತಂದೆ ಯಾರು ಎಂಬುದು ನಿಮಗೆ ಗೊತ್ತಾಗುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.
Advertisement
Advertisement
ರಾಧಿಕಾ ಪಂಡಿತ್ ಅವರು ಕೂಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಐರಾಳನ್ನು ಎತ್ತಿಕೊಂಡಿರುವ ಫೋಟೋ ಹಾಕಿ ಅದಕ್ಕೆ, “ನಮ್ಮ ಹೆಣ್ಣು ಮಗಳಿಗೆ ಇಂದು ಎಂಟು ತಿಂಗಳು ತುಂಬಿದೆ” ಎಂದು ಬರೆದುಕೊಂಡಿದ್ದಾರೆ. ಸದ್ಯ ರಾಧಿಕಾ ಅವರ ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ಮಗಳು ಐರಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ರಾಧಿಕಾ ಎರಡನೇ ಮಗುವಿನ ಗರ್ಭಿಣಿಯಾಗಿದ್ದು, ಈ ವಿಷಯವನ್ನು ಅವರು ಐರಾ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
ಈ ಹಿಂದೆ ಆದಿಲಕ್ಷ್ಮಿ ಪುರಾಣ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾಗ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ದೇವರ ದಯೆಯಿಂದ ಸಿಹಿ ಸುದ್ದಿ ಜೀವನದಲ್ಲಿ ಮತ್ತೆ ಬಂದಿದೆ. ಮತ್ತೊಂದು ಎಡಿಷನ್ಗೆ ಕಾಯುತ್ತಿದ್ದೇವೆ. ಎಲ್ಲದ್ದಕ್ಕೂ ಒಂದು ಹಣೆಬರಹ ಅಂತ ಒಂದು ಇರುತ್ತದೆ. ಆಯಿತಲ್ಲ ಇನ್ನೇನು ಎಂದು ರಾಧಿಕಾ ಪಂಡಿತ್ ಖುಷಿ ವ್ಯಕ್ತಪಡಿಸಿದ್ದರು.