ಸುಮಲತಾ ಅಂಬರೀಶ್ (Sumalatha Ambreesh) ಮನೆಯಲ್ಲಿ ಸಂತಸ ಮನೆ ಮಾಡಿದೆ. ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅವರೊಂದಿಗೆ (Abhishek) ಮತ್ತು ಫ್ಯಾಷನ್ ಡಿಸೈನರ್ ಪ್ರಸಾದ್ ಪುತ್ರಿ ಅವಿವಾ ಬಿದ್ದಪ್ಪ(Aviva Biddappa) ಅವರ ಎಂಗೇಜ್‌ಮೆಂಟ್ ಇಂದು ನೆರವೇರಿದೆ. ಹೊಸ ಜೋಡಿಗೆ ಶುಭ ಹಾರೈಸಲು ಯಶ್ (Yash) ಮತ್ತು ರಾಧಿಕಾ(Radhika Pandit) ದಂಪತಿ ಸೇರಿದಂತೆ ಹಲವು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ 5 ವರ್ಷಗಳು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಮಾಡೆಲ್ ಕಮ್ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಮತ್ತು ಅಭಿಷೇಕ್ ಪ್ರೀತಿಗೆ ಗುರುಹಿರಿಯರು ಸಮ್ಮತಿ ಸೂಚಿಸಿದ್ದಾರೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಮತ್ತು ಅಭಿಷೇಕ್ ನಿಶ್ಚಿತಾರ್ಥಕ್ಕೆ ಇಡೀ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ರಂಗವೇ ಸಾಕ್ಷಿಯಾಗಿದೆ. ಈ ಮುದ್ದಾದ ಜೋಡಿಗೆ ಇದೀಗ ಯಶ್ ದಂಪತಿ ಮತ್ತು ಆರ್. ಅಶೋಕ್, ಗುರುಕಿರಣ್ ದಂಪತಿ, ನಿರ್ದೇಶಕ ಮಹೇಶ್ ಕುಮಾರ್ ಕೂಡ ಭಾಗಿಯಾಗಿ, ಶುಭಹಾರೈಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಸಿಎಂ ಭೇಟಿಯಾದ `ಕಾಂತಾರ’ ಹೀರೋ ರಿಷಬ್
ಸಮಲತಾ ಮತ್ತು ಅವಿವಾ ಕುಟುಂಬದ ಜೊತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಹಾಜರಿದ್ದು, ಜೋಡಿಗೆ ಶುಭಹಾರೈಸಿದ್ದಾರೆ. ಇನ್ನೂ ಅಭಿಷೇಕ್ ಮತ್ತು ಅವಿವಾ ಜೋಡಿಯೂ ಮುಂದಿನ ವರ್ಷ ಹಸೆಮಣೆ ಏರಲಿದೆ.