– ಯಶ್ ನಿವಾಸದಲ್ಲಿ ಕೊನೆಯ ಹಂತಕ್ಕೆ ಬಂದ ಶೋಧ ಕಾರ್ಯ
ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ತಂದೆ ಮನೆಯಲ್ಲಿ ಐಟಿ ಪರಿಶೋಧನೆ ಮುಕ್ತಾಯವಾಗಿದೆ.
ಐಟಿ ಅಧಿಕಾರಿಗಳು ಶುಕ್ರವಾರ ತಡರಾತ್ರಿ ರಾಧಿಕಾ ತಂದೆ ಮನೆಯಿಂದ ತೆರಳಿದ್ದಾರೆ. ಅಧಿಕಾರಿಗಳು ತಮ್ಮ ಜೊತೆ ಹೋಗುವಾಗ ಒಂದು ಸೂಟ್ ಕೇಸ್ ನಲ್ಲಿ ದಾಖಲೆಗಳು ಹಾಗೂ ಒಂದು ಬ್ಯಾಗ್ ನಲ್ಲಿ ಜ್ಯುವೆಲ್ಲರಿ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ
Advertisement
Advertisement
ಜಪ್ತಿ ಮಾಡಿರುವ ವಸ್ತುಗಳು ಮತ್ತು ದಾಖಲೆಗಳ ಕುರಿತಾಗಿ ಅಧಿಕಾರಿಗಳು ರಿಪೋರ್ಟ್ ಕೊಟ್ಟಿದ್ದಾರೆ. ಈ ಹಿನ್ನೆಲೆ ಇಂದು ಯಶ್ ಮಾವನ ಮನೆಗೆ ಐಟಿ ಅಧಿಕಾರಿಗಳು ಬರುವುದು ಡೌಟ್ ಎಂದು ಹೇಳಲಾಗುತ್ತಿದೆ. ಐಟಿ ದಾಳಿ ನಂತರ ಯಶ್ ಅವರು ರಾಧಿಕಾ ಮನೆಗೆ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ: 20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?
Advertisement
Advertisement
ಇತ್ತ ಯಶ್ ಮನೆಯಲ್ಲಿ ಶೋಧ ಕಾರ್ಯ ಕೊನೆಯ ಹಂತಕ್ಕೆ ಬಂದಿದೆ. ಶುಕ್ರವಾರ ರಾತ್ರಿಯೇ ಯಶ್ ಮನೆಗೆ ಭೇಟಿ ಕೊಟ್ಟ ಜಂಟಿ ಆಯುಕ್ತ ರಮೇಶ್ ಅಂತಿಮವಾಗಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಯಶ್‍ಗೆ ಬಂದಿರುವ ಗಿಫ್ಟ್ ಗಳ ಮೇಲೆ ತನಿಖೆ ಮಾಡುತ್ತಿದ್ದಾರೆ. ಇಬ್ಬರು ಅಧಿಕಾರಿಗಳು ಪಂಚನಾಮೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಎಲ್ಲವೂ ಬಹುತೇಕ ಅಂತ್ಯವಾಗುವ ಸಾಧ್ಯತೆ ಇದೆ. ಕೊನೆಯ ಹಂತದ ವಿಚಾರಣೆಯಲ್ಲಿ ಯಶ್ ಮತ್ತು ಅವರ ತಾಯಿ ಪುಷ್ಪಾ ಭಾಗಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv