ಸ್ಟೆಪ್ ಹೇಳಿಕೊಟ್ಟು ಪತ್ನಿಯೊಂದಿಗೆ ಯಶ್ ಡ್ಯಾನ್ಸ್ – ವಿಡಿಯೋ ವೈರಲ್

Public TV
1 Min Read
yash dance

ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ದಂಪತಿ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ನಿಶ್ಚಿತಾರ್ಥ ಮಾಡಿಕೊಂಡು ಇವತ್ತಿಗೆ 3 ವರ್ಷ ಕಳೆದಿದೆ. ಈ ಖುಷಿಯನ್ನು ರಾಧಿಕಾ ಅವರು ಒಂದು ಕ್ಯಾಟ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ರಾಧಿಕಾ ಹಾಗೂ ಯಶ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗೆಯೇ ಯಶ್ ಸದ್ಯ ‘ಕೆ.ಜಿ.ಎಫ್ ಚಾಪ್ಟರ್ 2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇವತ್ತಿಗೆ ಯಶ್-ರಾಧಿಕಾರ ನಿಶ್ಚಿತಾರ್ಥವಾಗಿ ಬರೋಬ್ಬರಿ 3 ವರ್ಷ ಕಳೆದಿದೆ. ಈ ಖುಷಿಯನ್ನು ರಾಕಿಂಗ್ ದಂಪತಿ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ‘ಕೆ.ಜಿ.ಎಫ್ ಚಾಪ್ಟರ್ 1’ ಹಿಂದಿ ಸಿನಿಮಾದ ‘ಗಲಿ ಗಲಿ ಮೇ’ ಐಟಂ ಹಾಡಿಗೆ ಯಶ್-ರಾಧಿಕಾ ಸಖತ್ ಸ್ಟೆಪ್ ಹಾಕಿರುವ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಈ ಕ್ಯೂಟ್ ಕಪಲ್ಸ್ ಡ್ಯಾನ್ಸಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

yash family

ವಿಡಿಯೋದಲ್ಲಿ ರಾಧಿಕಾರನ್ನು ಅಪ್ಪಿಕೊಂಡು ಯಶ್ ಸ್ಟೆಪ್ ಹೇಳಿಕೊಟ್ಟಿದ್ದಾರೆ. ಈ ಸವಿನೆನಪಿನ ವಿಡಿಯೋವನ್ನು ರಾಧಿಕಾ ಇಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈಗಲೂ ನಾನು ನಿನ್ನ ತಾಳಕ್ಕೆ ಕುಣಿಯುತ್ತೇನೆ ಎಂದು ವಿಡಿಯೋಗೆ ಶೀರ್ಷಿಕೆ ಕೂಡ ಕೊಟ್ಟಿದ್ದಾರೆ. ಈ ಕ್ಯೂಟ್ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಎಲ್ಲೆಡೆ ಈ ವಿಡಿಯೋ ವೈರಲ್ ಆಗುತ್ತಿದೆ.

ಇಲ್ಲಿಯವರೆಗೆ ಕೇವಲ ಸಿನಿಮಾಗಳಲ್ಲಿ ಈ ಜೋಡಿ ಹೆಜ್ಜೆ ಹಾಕಿದ್ದನ್ನು ಅಭಿಮಾನಿಗಳು ನೋಡಿದ್ದರು. ಆದರೆ ಈಗ ಜೋಡಿ ಫನ್ನಿಯಾಗಿ ಡ್ಯಾನ್ಸ್ ಮಾಡುತ್ತಾ ಖುಷಿಪಡುತ್ತಿರುವ ವಿಡಿಯೋ ಎಲ್ಲರ ಮನ ಗೆದ್ದಿದೆ. ಈವರೆಗೆ ಈ ವಿಡಿಯೋವನ್ನು 3.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವಿಡಿಯೋಗೆ 2.5 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದಾರೆ.

https://www.instagram.com/p/B1DUhsggJaA/

Share This Article
Leave a Comment

Leave a Reply

Your email address will not be published. Required fields are marked *