ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ನಟಿ ರಾಧಿಕಾ ಪಂಡಿತ್ (Radhika Pandit) ದಂಪತಿಯ ಪುತ್ರ ಯಥರ್ವ್ 6ನೇ ವರ್ಷದ ಹುಟ್ಟುಹಬ್ಬಕ್ಕೆ ಇದೇ ಅ.30ಕ್ಕೆ ಆಚರಿಸಿಕೊಂಡ್ರು. ಈ ಬಾರಿ ಯಥರ್ವ್ ಹುಟ್ಟುಹಬ್ಬ ಬಹಳ ವಿಶೇಷವಾಗಿತ್ತು. ರಕ್ಷಿಸಲ್ಪಟ್ಟ ನಿಜ ಪ್ರಾಣಿ ಪಕ್ಷಿಗಳ ಜೊತೆ ಯಥರ್ವ್ ಹುಟ್ಟುಹಬ್ಬ ಆಚರಿಸಲಾಗಿದೆ.
ಬೆಂಗಳೂರು ಹೊರವಲಯದ ಪ್ರಾಣಿ ದಿ ಪೆಟ್ ಸೆಂಚುರಿಯಲ್ಲಿರುವ ರಕ್ಷಿಸಲ್ಪಟ್ಟ ಸುಂದರ ಪ್ರಾಣಿ-ಪಕ್ಷಿಗಳನ್ನ ಖಾಸಗಿ ಹೋಟೆಲ್‌ಗೆ ಕರೆಸಿ ಕಾಡಿನ ಥೀಮ್‌ನಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು. ಪ್ರಾಣಿಗಳ ಆಕೃತಿಯನ್ನೇ ಡೆಕೊರೇಷನ್‌ಗೆ ಬಳಸಲಾಗಿತ್ತು. ದಟ್ಟ ಕಾಡು ಹೋಲುವ ರೀತಿಯಲ್ಲೇ ಥೀಮ್ ಸೃಷ್ಟಿಸಲಾಗಿತ್ತು. ಹೆಬ್ಬಾವು, ವಿವಿಧ ಪಕ್ಷಿಗಳು, ಉಡ ಜಾತಿಗೆ ಸೇರಿದ ಪ್ರಾಣಿಗಳನ್ನ ಮಕ್ಕಳು ಕೈಯಲ್ಲಿ ಹಿಡಿದು ಖುಷಿಪಟ್ಟರು. ಇದನ್ನೂ ಓದಿ: ದುನಿಯಾ ವಿಜಯ್ ನನ್ನ ಮಗ: ನಟಿ ಉಮಾಶ್ರೀ
ಮಗ ಯಥರ್ವ್ ಹುಟ್ಟುಹಬ್ಬದ ವೀಡಿಯೋವನ್ನ ನಟಿ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದೇ ಥೀಮ್ ಯಾಕೆ ಅನ್ನೋದರ ಕುರಿತು ಮಹಿತಿಯನ್ನೂ ಹಂಚಿಕೊಂಡಿದ್ದಾರೆ. ‘ನಮ್ಮ ಪ್ರಕೃತಿ ಪ್ರೇಮಿ ಯಥರ್ವ್‌ಗೆ ಅದ್ಭುತವಾದ ಆರನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು. ಆ ದಿನವೂ ಪ್ರಕೃತಿ ಜೊತೆ ಮನುಷ್ಯನ ಸಹಾನುಭೂತಿ ಮತ್ತು ಸಹಬಾಳ್ವೆಯ ಸುಂದರ ಜ್ಞಾಪನೆಯಾಗಿತ್ತು. ರಕ್ಷಿಸಲ್ಪಟ್ಟ ಸುಂದರ ಪ್ರಾಣಿಗಳನ್ನು ಇಲ್ಲಿಗೆ ಕರೆತಂದಿದ್ದಕ್ಕಾಗಿ ಪ್ರಾಣಿ ದಿ ಪೆಟ್ ಸ್ಯಾಂಕ್ಚ್ಯುರಿಗೆ ವಿಶೇಷ ಧನ್ಯವಾದಗಳು ಎಂದಿದ್ದಾರೆ ರಾಧಿಕಾ. ಒಟ್ನಲ್ಲಿ ಟಾಕ್ಸಿಕ್ ಚಿತ್ರ ಬಿರುಸಿನ ಚಿತ್ರೀಕರಣದ ನಡುವೆ ಯಶ್ ಮಕ್ಕಳಿಗೂ ಸಮಯ ಕೊಟ್ಟಿದ್ದಾರೆ. ಅದ್ದೂರಿಯಾಗಿ ಥೀಮ್ ಜೊತೆಗೆ ಹುಟ್ಟುಹಬ್ಬ ಆಚರಿಸಿ ಗಮನ ಸೆಳೆದಿದ್ದಾರೆ.


