ಹೊಸ ವರ್ಷದ ಯುಗಾದಿ ಹಬ್ಬದ ಸಡಗರ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ಸ್ಯಾಂಡಲ್‌ವುಡ್ ಸ್ಟಾರ್‌ಗಳ ಮನೆಯಲ್ಲೂ ಹಬ್ಬ ಜೋರಾಗಿದೆ. ಪ್ರತಿವರ್ಷದಂತೆ ಈ ಬಾರಿಯು ಕೂಡ ರಾಕಿಂಗ್ ಸ್ಟಾರ್ ದಂಪತಿ ಯುಗಾದಿ ಹಬ್ಬವನ್ನ ಸರಳವಾಗಿ ಆಚರಿಸಿದ್ದಾರೆ.
ಹೌದು. ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಹಬ್ಬದ ಸಂಭ್ರಮದಲ್ಲಿ ಕುಟುಂಬದೊಂದಿಗೆ ವಿಶೇಷ ಭೋಜನ ಸವಿಯುತ್ತಿರುವ ಫೋಟೋವನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಾಧಿಕಾ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ಕೂಡ ದಂಪತಿಗೆ ಶುಭ ಹಾರೈಸುತ್ತಿದ್ದಾರೆ. ಇದನ್ನು ಓದಿ:‘ಬೆಲ್ ಬಾಟಮ್ 2’ ಮೊದಲೇ ಧನ್ವೀರ್ಗೆ ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಜಯತೀರ್ಥ
View this post on Instagram
ರಾಧಿಕಾ ಪಕ್ಕದಲ್ಲಿ ಐರಾ ಕೂತಿದ್ದರೆ, ಯಶ್ ಪಕ್ಕದಲ್ಲಿ ಯಥರ್ವ್ ಕೂತು ಊಟ ಮಾಡುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಫೋಟೋ ಜೊತೆಗೆ ʻಈ ವರ್ಷ ಬೇವಿಗಿಂತಾ ಬೆಲ್ಲ ಜಾಸ್ತಿಯಿರಲಿ. ಒಬ್ಬಟ್ಟು ಜಾಸ್ತಿ ತಿನ್ನಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳುʼ ಅಂತಾ ಅಭಿಮಾನಿಗಳಿಗೆ ರಾಧಿಕಾ ವಿಶ್ ಮಾಡಿದ್ದಾರೆ. ರಾಕಿಂಗ್ ದಂಪತಿಯ ಹಬ್ಬದ ಸಂಭ್ರಮದ ಫೋಟೋಸ್ ನೋಡಿ ಅಭಿಮಾನಿಗಳು ಕೂಡ ಸಂತಸಗೊಂಡಿದ್ದಾರೆ. ಇದನ್ನು ಓದಿ: ಯುಗಾದಿ ಸಂಭ್ರಮದಲ್ಲಿ ಮಿಂದೆದ್ದ ಸ್ಯಾಂಡಲ್‌ವುಡ್ ತಾರೆಯರು
ಯುಗಾದಿ ಹಬ್ಬದ ಖುಷಿಯಲ್ಲಿರೋ ಅಭಿಮಾನಿಗಳು `ಕೆಜಿಎಫ್ 2′ ಸಿನಿಮಾಗಾಗಿ ಕಾಯ್ತಿದ್ದಾರೆ. ರಾಕಿಬಾಯ್ ಜೋಶ್ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಕಾತರರಾಗಿದ್ದಾರೆ.