ನ್ಯಾಷನಲ್ ಯಶ್ (Yash) ಅವರು ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹಾಲಿವುಡ್ ನಟಿ ಟೆಟಿಯಾನಾ ಗೈದರ್ ಜೊತೆ ಯಶ್ ಕಾಣಿಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ರಾಕಿ ಬಾಯ್ ಜೊತೆಗಿನ ಫೋಟೋವನ್ನು ಹಾಲಿವುಡ್ (Hollywood) ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಗೃಹಪ್ರವೇಶದ ಸಂಭ್ರಮದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಸೋನು ಗೌಡ
ಇತ್ತೀಚೆಗೆ ಯಶ್ ಅವರನ್ನು ಹಾಲಿವುಡ್ ನಟಿ ಟೆಟಿಯಾನಾ ಗೈದರ್ ಭೇಟಿಯಾಗಿದ್ದಾರೆ. ನಟಿ ಗನ್ ಸಖತ್ ಆ್ಯಕ್ಷನ್ ಮಾಡಿರುವ ಸಣ್ಣ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಇದನ್ನು ಟೆಟಿಯಾನಾ ಚಪ್ಪಾಳೆ ಹೊಡೆದು ವೆಲ್ ಡನ್ ಎಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬೆಲ್ಲಾ ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ಈ ಹಾಲಿವುಡ್ ನಟಿ ಕೂಡ ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರಾ? ಎಂದು ನೆಟ್ಟಿಗರ ಚರ್ಚೆ ಶುರುವಾಗಿದೆ.
View this post on Instagram
ಇತ್ತೀಚೆಗೆ ಮುಂಬೈನಲ್ಲಿ ನಡೆಯುತ್ತಿರುವ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್‌ನಲ್ಲಿ ಹಾಲಿವುಡ್ ನಟ ಜೆಜೆ ಪರ‍್ರಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಯಾವದಕ್ಕೂ ತಂಡದ ಕಡೆಯಿಂದ ಸಿನಿಮಾ ಕುರಿತು ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.
ಇನ್ನೂ ‘ಕೆಜಿಎಫ್ 2’ ಸಕ್ಸಸ್ ನಂತರ ಯಶ್ ‘ಟಾಕ್ಸಿಕ್’ (Toxic) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಯಶ್ ಜೊತೆ ಕೆವಿಎನ್ ಸಂಸ್ಥೆ ನಿರ್ಮಾಣದ ಹೊಣೆ ಹೊತ್ತಿದೆ.