8000 ಕಿಲೋಮೀಟರ್ ಯಶ್ (Yash) ಪ್ರಯಾಣ ಯಾರಿಗಾಗಿ? ಯಾಕಾಗಿ? 40 ರಿಂದ 50 ದಿನಗಳ ವೃತ ಆ ಊರಲ್ಲಿ ಯಾರ ಜೊತೆಯಲ್ಲಿ? ಶ್ರೀಲಂಕಾದಲ್ಲಿ ಅದೇನು ಕೆಲಸ ರಾಕಿಂಗ್ ಸ್ಟಾರ್‌ಗೆ? ಹಗಲು-ರಾತ್ರಿ ಯಶ್ ಹಾಕಿಕೊಂಡಿರುವ ಗುರಿ ಮುಂದು. ಕಳೆದ ಕೆಲ ದಿನಗಳಲ್ಲಿ ರಾಕಿಂಗ್ ಸ್ಟಾರ್ ಎಲ್ಲೆಲ್ಲಿಗೆ ಹೋಗಿ ಬಂದ್ರು? ಯಾರನ್ನ ಭೇಟಿ ಮಾಡಿದ್ರು? ರಾಮಾಚಾರಿಯ ಈ ಶರವೇಗದ ಓಟದ ಹಿಂದಿರುವ ಅಸಲಿ ಕತೆ ಏನು? ಇಲ್ಲಿದೆ ಮಾಹಿತಿ.
Advertisement
ಕೆಜಿಎಫ್ (KGF) ಹಿಟ್ ಆಯ್ತು, ಮತ್ಯಾಕೆ ಸಿನಿಮಾ ಅನೌನ್ಸ್ ಮಾಡ್ತಿಲ್ಲ ಜನ ಕೇಳ್ತಿದ್ದಾರೆ. ನಿರ್ಮಾಪಕರು ಸೂಟ್ ಕೇಸ್ ಹಿಡಿದು ವೆಸ್ಟ್ಎಂಡ್ ಯಶ್ ಆಫೀಸ್‌ಗೆ ಸುತ್ತಿ ಸುತ್ತಿ ಸುಸ್ತಾಗಿದ್ದಾರೆ. ಯಾವ ಪ್ರಶ್ನೆಗಳನ್ನೂ ಯಶ್ ತಮ್ಮ ಕೋಟೆಯೋಳಗೆ ಬಿಟ್ಟು ಕೊಂಡಿಲ್ಲ ಯಾರ ಸೂಟ್‌ಕೇಸ್‌ನಿಂದಲೂ ರಾಕಿಂಗ್ ಸ್ಟಾರ್ ಒಂದು ಕಿಲುಬು ಕಾಸು ಎತ್ತಿಕೊಂಡಿಲ್ಲ. ಕಾರಣ ಮೊದಲು ಕತೆ ರೆಡಿಯಾಗಬೇಕು. ಒಳ್ಳೆಯ ಕತೆಗೆ ಮಾತ್ರ ಗೆಲ್ಲೋ ಯೋಗ್ಯತೆ ಇರೋದು ಅನ್ನೊ ಸತ್ಯದ ಬೆನ್ನು ಬಿದ್ದಿದ್ದಾರೆ. ಈಗ ಎಲ್ಲವೂ ಫೈನಲ್ ಆಗಿದೆ. ಹೊಸ ಹೆಜ್ಜೆಗೆ ಯಶ್ ಮುನ್ನುಡಿ ಬರೆದಾಗಿದೆ. ಇದನ್ನೂ ಓದಿ:ಬೆಂಗಳೂರು ಕಂಬಳಕ್ಕೆ ಬರಲಿದ್ದಾರೆ ಅನುಷ್ಕಾ ಶೆಟ್ಟಿ, ಐಶ್ವರ್ಯಾ ರೈ
Advertisement
Advertisement
ಯಶ್ 19 (Yash 19) ಸಿನಿಮಾದ ಫಸ್ಟ್ ಲುಕ್ ರೆಡಿಯಾಗಿ 2-3 ತಿಂಗಳಾಗಿದೆ. ಟೈಟಲ್ ಟೀಸರ್ ರೆಡಿಯಾಗಿ ಬಹಳ ದಿನಗಳಾಗಿವೆ. ಯಶ್ ಅದನ್ನ ಮತ್ತೆ ಮತ್ತೆ ಕಣ್ಣರಳಿಸಿ ನೋಡ್ತಿದ್ದಾರೆ. ಕಾರಣ ಒಂದು ಸಣ್ಣ ತಪ್ಪು ಕೂಡ ತಂಡದ ಕಡೆಯಿಂದ ಆಗಬಾರದು ಅಂತ. ಈಗ ಆಕಾಶ ತಿಳಿಯಾಗಿದೆ ಮುಂದೊಂದು ಮಹಾಮಳೆಗೆ ಬಾನು ಸಜ್ಜಾಗಿದೆ. ಯಶ್ ಸುಮಾರು 25 ದಿನ ಲಂಡನ್‌ನಲ್ಲಿ ಬೀಡು ಬಿಟ್ಟಿದ್ರು. ವಿದೇಶದಲ್ಲಿರುವ ಹಲವು ಟೆಕ್ನಿಷಿಯನ್ಸ್ ಭೇಟಿ ಮಾಡಿದ್ರು. ಮುಂದಿನ ಸಿನಿಮಾಗೆ ಬೇಕಾಗಿರುವ ಪೂರ್ವ ಭಾವಿ ತಯಾರಿ ಮಾಡಿಕೊಂಡ್ರು. 25 ದಿನದ ಜರ್ನಿಯಲ್ಲಿ ಒಂದು ಫೋಟೋ ಶೇರ್ ಮಾಡಲಿಲ್ಲ. ಒಬ್ಬರ ಹೆಸರು ರಿವಿಲ್ ಮಾಡಲಿಲ್ಲ. ಕಾರಣ ನಾವು ಮಾತಾಡೋದಲ್ಲ ನಮ್ಮ ಸಿನಿಮಾ ಮಾತಾಡ್ಬೇಕು ಅನ್ನೊ ಯಶ್ ನಿಲುವು. ಅಲ್ಲಿಂದ ರಾಕಿಭಾಯ್ ಪಯಣ ಸೀದಾ ಶ್ರೀಲಂಕಾಗೆ.
Advertisement
ಲಂಡನ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದು ಮಡದಿ, ಮಕ್ಕಳ ಮುಖ ನೋಡಿ ಮತ್ತೆ ಸೂಟ್‌ಕೇಸ್ ಜೊತೆ ಶ್ರೀಲಂಕಾಗೆ ಫ್ಲೈಟ್ ಹತ್ತಿದ್ರು. ಸುಮಾರು 15 ದಿನ ಶ್ರೀಲಂಕಾದಲ್ಲಿ ತಮ್ಮ ಮುಂದಿನ ಸಿನಿಮಾಗೆ ಬೇಕಾದ ಲೊಕೇಷನ್ ಫೈನಲ್ ಮಾಡಿಕೊಂಡಿ ಬಂದಿದ್ದಾರೆ. ಇದ್ರ ಜೊತೆ ಮಲೇಷಿಯಾದಲ್ಲಿ ಸ್ವಲ್ಪ ದಿನ ಸುತ್ತಾಡಿದ್ರು. ಅದು ಒಂದು ಶಾಪ್ ಓಪನಿಂಗ್ ವಿಚಾರ ಅಷ್ಟೇ ಅಂತಾರೆ ಯಶ್ ಆಪ್ತರು. ಆದ್ರೆ ಅಲ್ಲೂ ಒಂದಿಷ್ಟು ಸಿನಿಮಾ ಕೆಲಸಗಳನ್ನ ಮಾಡಿದ್ದಾರೆ ಅಂತಿದೆ ನಮ್ಮ ಮೂಲಗಳು.
ಸದ್ಯ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ ಯಶ್. ಸಿನಿಮಾ ಕೆಲಸ ಶುರು ಮಾಡುವ ಮೊದಲು ಒಂದು ಸಣ್ಣ ರಿಲ್ಯಾಕ್ಸ್ ಮಾಡ್ತಿದ್ದಾರೆ. ಮಂಗಳವಾರ ಅಥವಾ ಬುಧವಾರ ಬೆಂಗಳೂರಿಗೆ ವಾಪಸ್ ಬರ್ತಾರೆ. ದೀಪಾವಳಿಗೆ ಸಿನಿಮಾ ಅನೌನ್ಸ್ ಮಾಡ್ತಾರೆ ಫ್ಯಾನ್ಸ್ ಪಟಾಕಿ ಹಚ್ಚುವ ಸುದ್ದಿ ಕೊಡ್ತಾರೆ. ಈ ಬಾರಿಯ ಯಶ್ ಹೋರಾಟ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಅಂತಿದೆ ಯಶ್ ಬಳಗ.