ಯಶ್ (Yash) ಕೊನೆಗೂ ಆ ಮಹಾ ನಿರ್ಧಾರಕ್ಕೆ ಬಂದಿದ್ದಾರೆ. ಯಾವಾಗ ಗುರು ಸಿನಿಮಾ ? ಹೀಗಂತ ಹೋದಲ್ಲಿ ಬಂದಲ್ಲಿ ಕೇಳುತ್ತಿದ್ದ ಜನರಿಗೆ ಉತ್ತರ ಹೇಳಲು ಅಖಾಡ ರೆಡಿ ಮಾಡಿಕೊಂಡಿದ್ದಾರೆ. ಈಗ ಎಲ್ಲವೂ ಮುಗಿದಿದೆ. ಎಲ್ಲವೂ ಸಜ್ಜಾಗಿದೆ. ಇನ್ನೇನು ಶೂಟಿಂಗ್ ಹೋಗುವುದೊಂದೇ ಬಾಕಿ. ಹಾಗಿದ್ದರೆ ಯಾವಾಗ ಯಶ್ 19 (Yash 19) ಸಿನಿಮಾ ಘೋಷಣೆ? ಅದಕ್ಕಾಗಿ ಇಷ್ಟು ವರ್ಷ ಮಾಡಿಕೊಂಡಿರುವ ತಯಾರಿ ಹೇಗಿದೆ? ಯಾವ ರೀತಿ ಯುದ್ಧಕ್ಕೆ ಇಳಿಯಲಿದೆ ರಾಕಿಭಾಯ್ ತಂಡ? ಇಲ್ಲಿದೆ ಮಾಹಿತಿ.
Advertisement
ಇಡೀ ವಿಶ್ವವೇ ತಲೆ ಕೆಟ್ಟು ಕುಂತಿದೆ. ಆಗ ಈಗ ಎನ್ನುತ್ತಾ ಯಶ್ ಒಂದೂವರೆ ವರ್ಷ ಕಳೆದು ಬಿಟ್ಟರು. ಬರುತ್ತೀನಿ ಬರುತ್ತೀನಿ ಎನ್ನುತ್ತಲೇ ಇಷ್ಟು ತಿಂಗಳು ತಳ್ಳಿದರು. ಆದರೆ ಅದನ್ನು ತಳ್ಳಿಲ್ಲ. ಒಂದೊಂದು ದಿನ ಒಂದೊಂದು ತಿಂಗಳನ್ನು ಜಿಪುಣನಂತೆ ಖರ್ಚು ಮಾಡಿದ್ದಾರೆ. ಎಣಿಸಿ ಎಣಿಸಿ ತೂಕ ಮಾಡಿ ಕತೆ ಹೆಣೆಸಿದ್ದಾರೆ. ಅದಕ್ಕೆ ಚಿತ್ರಕತೆ ಪೋಣಿಸುವಾಗ ಮಗುವಂತೆ ಹಠ ಹಿಡಿದಿದ್ದಾರೆ. ಡೈಲಾಗ್ ಬರೆಸುವಾಗ ನಿದ್ದೆಗೆಟ್ಟಿದ್ದಾರೆ. ಇದ್ಯಾಕೆ ಹೀಗೆ? ಅದ್ಯಾಕೆ ಹಾಗೆ? ಹಾಗಿರಬೇಕಿತ್ತು. ಹೀಗಿದ್ದರೆ ಸೂಪರ್ ಸಲಹೆ ಕೊಡುತ್ತಾ ಎಲ್ಲರನ್ನೂ ಒಪ್ಪಿಸುತ್ತಾ ಸಿನಿಮಾ ಧ್ಯಾನ ಮಾಡುತ್ತಾ. ಈಗ ಹೊಸ ಅಂಗಿ ಪ್ಯಾಂಟು ಹಾಕಿಕೊಂಡು ನಿಂತಿದ್ದಾರೆ. ರಣರಂಗಕ್ಕೆ ಒಂದೇ ಹೆಜ್ಜೆ ಬಾಕಿ.
Advertisement
Advertisement
ಅಯ್ಯೋ ಅದ್ಯಾವ ಕತೆ ಮಾಡ್ತಿದ್ದಾರೊ? ಇನ್ನೆಷ್ಟು ವರ್ಷ ಬೇಕೊ? ಈ ಯುಗದಲ್ಲೇ ಸಿನಿಮಾ ರಿಲೀಸ್ ಆಗುತ್ತಾ ಅಥವಾ ಇನ್ನೊಂದು ಯುಗ ಕಾಯಬೇಕಾ? ಬೆನ್ನ ಹಿಂದೆ ಮಾತಾಡಿಕೊಂಡವರಿಗೆ ಲೆಕ್ಕ ಇಲ್ಲ. ಕಾರಣ ಅವರಿಗೆ ಯಶ್ ತಲೆಯಲ್ಲಿ ಓಡುತ್ತಿರುವುದೇನು. ಮೆದುಳಲ್ಲಿ ಚೌಕಾಬಾರ ಹಾಕುತ್ತಿದ್ದ ಪ್ರಶ್ನೆಗಳೇನು. ಇರುವುದೆಲ್ಲವ ಬಿಟ್ಟು ಇನ್ಯಾವ ಕಡೆ ಮನಸು ತುಡಿಯುತ್ತಿದೆ? ಇಷ್ಟು ಮತ್ತು ಇದೆಲ್ಲ ಅರಿವಿಗೆ ಇರಲಿಲ್ಲ. ಅಫ್‌ಕೋರ್ಸ್ ಈಗಲೂ ಇಲ್ಲ. ಕಾರಣ ಸಿಂಪಲ್ ಮತ್ತು ಸಿಂಗಲ್. ಯಶ್ ದಿವ್ಯ ತಪಸ್ಸು ಅಷ್ಟೊಂದು ನಿಶ್ಯಬ್ದವಾಗಿದೆ. ರಣರಂಗ ಕೈ ಬೀಸಿ ಕರೆಯುತ್ತಿದೆ. ಇದನ್ನೂ ಓದಿ:ಕುಡಿದು ಬೈಕ್ ಸವಾರನೇ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ: ಚಂದ್ರಪ್ರಭಾ
Advertisement
ನೀವಿದನ್ನು ಯೋಚಿಸಿರಲು ಸಾಧ್ಯ ಇಲ್ಲ. ಕಲ್ಪನೆ ಕೂಡ ಮಾಡಿಕೊಂಡಿರಲ್ಲ. ಹಾಗಿರುತ್ತಾ ಹೀಗಿರುತ್ತಾ ಎನ್ನುವ ಪ್ರಶ್ನೆ ಹಾಕಿಕೊಂಡು ಉತ್ತರ ಕೊಟ್ಟುಕೊಂಡು ಸುಮ್ಮನಿರುತ್ತೀರಿ. ಅದನ್ನೆಲ್ಲ ಮೀರಿ ಅದಕ್ಕೆಲ್ಲ ಸೆಡ್ಡು ಹೊಡೆದು ಇಲ್ಲಿವರೆಗೆ ಕೇಳದ ನೋಡದ ಜಗತ್ತನ್ನು ಅನಾವರಣ ಮಾಡಲಿದ್ದಾರೆ ಯಶ್. ಅದಕ್ಕಾಗಿಯೇ ಇಷ್ಟೊಂದು ಬೆವರು ಸುರಿಸುತ್ತಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಸಾಥ್ ಕೊಟ್ಟಿದ್ದಾರೆ. ಎಂಟು ತಿಂಗಳಿಂದ ಅವರು ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ನೆಲೆಸಿದ್ದಾರೆ. ಯಶ್ ಕನಸನ್ನು ತೆರೆ ಮೇಲೆ ತರಲು ಊಟ ಮರೆತಿದ್ದಾರೆ. ರಾಕಿ ಎಲ್ಲರಿಗೂ ಕೆಲಸ ವಿವರಿಸುತ್ತಾ ಹುರುಪು ತುಂಬುತ್ತಾ ಹೊಸಿಲಲ್ಲಿ ನಿಂತಿದ್ದಾರೆ. ರಣರಂಗದ ಅಂಗಳದಲ್ಲಿ ರಂಗೋಲಿ ನಗುತ್ತಿದೆ.
ಈಗ ಮತ್ತು ಇಲ್ಲಿವರೆಗೆ ಎಲ್ಲರನ್ನು ಕಾಡುತ್ತಿದ್ದ ಪ್ರಶ್ನೆ ಒಂದೇ. ಇಷ್ಟೆಲ್ಲ ತಯಾರಿ ಮಾಡಿಕೊಂಡಿದ್ದರೂ ಯಾಕಿಷ್ಟು ಲೇಟು? ಉತ್ತರ ಇಲ್ಲಿದೆ. ಯಶ್ ಅದೊಂದು ಮಹಾ ಪ್ರಮಾಣ ಮಾಡಿದ್ದಾರೆ. ವರ್ಷವೋ ಎರಡು ವರ್ಷವೋ ಬೇಕಾಗಿಲ್ಲ. ಸಿನಿಮಾ ಮಾಡಿದರೆ ಹೀಗೇ ಇರಬೇಕು. ಎಲ್ಲರೂ ಬಹುಪರಾಕ್ ಹಾಕಬೇಕು. ಸಿನಿಮಾ ನೋಡದವರೂ ಥೇಟರ್‌ಗೆ ನುಗ್ಗಬೇಕು. ಅದಕ್ಕಿಂತ ಹೆಚ್ಚಾಗಿ ಹಾಲಿವುಡ್ ಲೆವೆಲ್‌ಗೆ ಕನ್ನಡ ಚಿತ್ರರಂಗ ಬೆಳೆಯಬೇಕು. ಈ ಶಪಥವೇ ತಡವಾಗಲು ಮುಖ್ಯ ಕಾರಣ. ಹಾಲಿವುಡ್ (Hollywood) ಶೈಲಿಯಲ್ಲಿ ಸ್ಟೋರಿ ಬೋರ್ಡ್ ತಯಾರಾಗಿದೆ. ಒಂದೊಂದು ಫ್ರೇಮ್ ಒಂದೊಂದು ಶಾಟ್ ಹೀಗಿರಬೇಕು. ಅಷ್ಟು ನಿಖರವಾಗಿ ಪ್ಲಾನ್ ಪಕ್ಕಾ ಆಗಿದೆ. ರಣರಂಗ ದೀಪ ಹಚ್ಚಿಕೊಂಡು ಕಾಯುತ್ತಿದೆ.
ಮುಂದಿನ ತಿಂಗಳು ಅಕ್ಟೋಬರ್ ತಿಂಗಳಿನಲ್ಲಿ ದಿವ್ಯ ದಿನ ನೋಡಿಕೊಂಡು ಪೂಜೆ ನಡೆಸಲಾಗುತ್ತದೆ. ದೇಶ ವಿದೇಶದ ಮಾಧ್ಯಮಗಳ ಮುಂದೆ ಟೈಟಲ್ ಘೋಷಿಸಲಾಗುತ್ತದೆ. ಫಸ್ಟ್ ಲುಕ್ ಕೂಡ ಅನಾವರಣವಾಗಲಿದೆ. ಉಳಿದೆಲ್ಲ ವಿವರ ಅಂದೇ ಹೊರ ಬರಲಿದೆ. ಕೊನೆಗೂ ಯಶ್ ಭಕ್ತಗಣದ ನಿರೀಕ್ಷೆ ಕೊನೆ ಹಂತಕ್ಕೆ ಬಂದಿದೆ. ಬರೀ ಅವರಷ್ಟೇ ಅಲ್ಲ. ರಾಕಿಭಾಯ್ ಗಳಿಸಿರುವ ದೇಶ ವಿದೇಶದ ಕೋಟಿ ಕೋಟಿ ಜನರೂ ಅದೊಂದು ಕ್ಷಣಕ್ಕಾಗಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕುಂತಿದ್ದಾರೆ. ಯಶ್ ಕುದುರೆ ಏರಿದ್ದಾರೆ. ಲಗಾಮು ಬಿಗಿಯಾಗಿ ಹಿಡಿದಿದ್ದಾರೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಆ ಘಳಿಗೆ ಇನ್ನೂ ದೂರ ಇಲ್ಲ.