ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ದೆಹಲಿ ಮತ್ತು ಎನ್‍ಸಿಆರ್ ಪ್ರದೇಶ ಸಂಪೂರ್ಣ ಸ್ತಬ್ಧವಾಗಿದ್ದು, ಈಗ ಪ್ರಕೃತಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ವಾಹನಗಳ ದಟ್ಟಣೆ ಇಳಿಮುಖವಾದ ಬಳಿಕ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಇಳಿಕೆಯಾಗಿ ಶುದ್ಧ ಗಾಳಿಯಾಗಿ ಬದಲಾಗಿತ್ತು.
ಈಗ ದೆಹಲಿಯ ಹೊರ ವಲಯದಲ್ಲಿರುವ ಕಾರ್ಖಾನೆಗಳು, ಕೈಗಾರಿಕೆಗಳು ಬಂದ್ ಆಗಿರುವ ಕಾರಣ ಯಮುನಾ ನದಿಯೂ ಶುದ್ಧವಾಗುತ್ತಿದೆ. ನದಿಯ ಮಾಲಿನ್ಯ ಪ್ರಮಾಣ ನಿಯಂತ್ರಣವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
Advertisement
Delhi: Aam Aadmi Party MLA Raghav Chadha has said, “The stoppage of industrial pollutants & industrial waste has definitely had a positive effect on water quality in Yamuna river. We will conduct testing of the water to ascertain the percentage of improvement in the quality”. https://t.co/CiPLd5nCSq
— ANI (@ANI) April 5, 2020
Advertisement
ಕೈಗಾರಿಕೆಗಳಿಂದ ನದಿಗೆ ಬಿಡಲಾಗುತ್ತಿದ್ದ ತಾಜ್ಯದ ಪ್ರಮಾಣ ಇಳಿಕೆಯಾದ ಕಾರಣ ನದಿಯಲ್ಲಿನ ನೀರು ಶುದ್ಧವಾಗಿದೆ. ನೀರಿನಲ್ಲಿನಲ್ಲಿದ್ದ ವಿಷಕಾರಿ ಅಂಶಗಳ ಪ್ರಮಾಣ ಕಡಿಮೆಯಾಗಿದೆ ಎಂದು ಜಲ ಮಂಡಳಿ ಉಪಾಧ್ಯಕ್ಷ ರಾಘವ್ ಚಾಧ್ ತಿಳಿಸಿದ್ದಾರೆ.
Advertisement
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್‍ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಆದ್ದರಿಂದ ದೆಹಲಿ ಸಂಪೂರ್ಣ ಬಂದ್ ಆಗಿದ್ದು, ನದಿ ನೀರು ಮತ್ತು ಗಾಳಿಯ ಗುಣಮಟ್ಟದಲ್ಲಿ ಮಾಲಿನ್ಯ ಇಳಿಕೆಯಾಗಿದೆ. ಆದರೆ ಈ ಬೆಳವಣಿಗೆ ತಾತ್ಕಾಲಿಕ, ಯಾಕೆಂದರೆ ಲಾಕ್‍ಡೌನ್ ತೆರವುಗೊಳಿಸದ ಬಳಿಕ ಮತ್ತೆ ಹಳೆ ಪರಿಸ್ಥಿತಿ ಮುಂದುವರಿಯಲಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
Advertisement
दिल्ली: देशभर में 21 दिनों के लॉकडाउन के चलते यमुना के जल की गुणवत्ता में सुधार आया है। #coronaviruslockdown pic.twitter.com/uloEWHbhr2
— ANI_HindiNews (@AHindinews) April 5, 2020
ಆಮ್ ಅದ್ಮಿ ಯಮುನಾ ನದಿ ಸ್ವಚ್ಛಗೊಳಿಸುವ ಭರವಸೆ ನೀಡಿದ್ದರು. ಈಗ ಅದನ್ನು ಮುಂದುವರಿಸಲು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.