ಚಿಕ್ಕೋಡಿ/ಬೆಳಗಾವಿ: ಒಂದು ಕಡೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಲಜ್ಜೆ ಬಿಟ್ಟು ರೆಸಾರ್ಟ್ ರಾಜಕಾರಣದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇದೇ ಅವಕಾಶ ಅಂತ ಸಚಿವರ ಪಿಎಗಳು ದರ್ಪ ಮೆರೆಯುತ್ತಿದ್ದಾರೆ.
ಆಪರೇಷನ್ ಕಮಲ ಭೀತಿಯಿಂದ ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿದ್ದೇ ಸೇರಿದ್ದು ಸಚಿವರ ಪಿಎಗಳ ದರ್ಬಾರ್ ಶುರುವಾಗಿದೆ. ಯಮಕನಮರಡಿ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಪ್ರಕಾಶ್ ಬಸ್ಸಾಪೂರೆ, ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದಲ್ಲಿ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಈಗ ಶಾಸಕರ ಪಿಎಗಳ ಶಿಷ್ಟಾಚಾರ ಉಲ್ಲಂಘನೆ ಹಾಗೂ ದರ್ಬಾರ್ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ
Advertisement
Advertisement
ಸತೀಶ್ ಜಾರಕಿಹೊಳಿ ಅವರಿಗೆ 10 ಕ್ಕೂ ಹೆಚ್ಚು ಜನ ಪಿಎಗಳಿದ್ದಾರೆ. ಕ್ಷೇತ್ರದಲ್ಲಿ ಶಾಸಕರಗಿಂತ ಪಿಎಗಳ ದೌಲತ್ತೆ ಹೆಚ್ಚು. ಯಾವುದೇ ಕೆಲಸ ಕಾರ್ಯಗಳು ಆಗಬೇಕಾದರೆ ಪಿಎಗಳ ರೆಕಮೆಂಡ್ ಇರಲೇಬೇಕು ಎಂದು ಕ್ಷೇತ್ರದ ಜನ ಅಳಲು ತೋಡಿಕೊಳ್ಳುತ್ತಿದ್ದರು ಶಾಸಕರು ಕೇರ್ ಮಾಡುತ್ತಿಲ್ಲ. ಹೀಗಾಗಿ ಪಿಎಗಳ ದರ್ಬಾರ್ ಹಾಗೂ ಅರಣ್ಯ ಸಚಿವರ ರೆಸಾರ್ಟ್ ರಾಜಕಾರಣದ ವಿರುದ್ಧ ಬಿಜೆಪಿ ಮುಖಂಡ ಹಾಗೂ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಾರುತಿ ಅಷ್ಟಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಲು-ಬಾಯಿ ಜ್ವರದಿಂದ ಸಾವನ್ನಪ್ಪಿದ ಹಸುಗಳು- ರೆಸಾರ್ಟ್ ನಲ್ಲಿ ಕುಳಿತ್ರು ಕಷ್ಟ ಕೇಳಬೇಕಾದ ಶಾಸಕರು !
Advertisement
Advertisement
ಇನ್ನೂ ಭೂಮಿ ಪೂಜೆಗೆ ಲೋಕೋಪಯೋಗಿ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿ ಪಿಎಗಳಿಗೆ ಅವಕಾಶ ಕೊಟ್ಟಿದ್ದು, ಕೂಡ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಕಡೆ ಜನ ಬರಗಾಲದಿಂದ ನೀರು, ಜಾನುವಾರುಗಳ ಮೇವಿಗಾಗಿ ಪರದಾಡುತ್ತಿದ್ದರೆ ಇತ್ತ ಶಾಸಕರು ರೆಸಾರ್ಟ್ ರಾಜಕಾರಣದಲ್ಲಿ ಬ್ಯುಸಿ ಆಗಿರುವುದು ನಿಜಕ್ಕೂ ದುರಂತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv