CinemaKarnatakaLatestMain PostSandalwoodTV Shows

‘ಮಗಳು ಜಾನಕಿ’ ಖ್ಯಾತಿಯ ನಟ ಯಲಹಂಕ ಬಾಲಾಜಿ ನಿಧನ

Advertisements

ಕಿರುತೆರೆಯ ನಟ ಯಲಹಂಕ ಬಾಲಾಜಿ ನಿಧನರಾಗಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ನರಳುತ್ತಿದ್ದ ಬಾಲಾಜಿ ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಸೀತಾ ರಾಮ್ ಅವರ ಬಹುತೇಕ ಧಾರಾವಾಹಿಗಳಲ್ಲಿ ಬಾಲಾಜಿ ನಟಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿಗಳಾದ ಮಾಯಾಮೃಗದಿಂದ ಮಗಳು ಜಾನಕಿವರೆಗೂ ಸೀತಾರಾಮ್ ಧಾರಾವಾಹಿಗಳಲ್ಲಿ ಬಾಲಾಜಿ ನಟಿಸಿದ್ದರು. ಅಲ್ಲದೇ, ರಂಗಭೂಮಿ ಮತ್ತು ಚಲನಚಿತ್ರಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಗಲಿದ ನಟನಿಗೆ ಕಂಬನಿ ಮಿಡಿದಿರುವ ಸೀತಾರಾಮ್ ‘ಅತ್ಯಂತ ಹೃದಯವಂತ ಗೆಳೆಯ. ಎಲ್ಲ ಕಷ್ಟಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ. ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ, ನಗುತ್ತಾ ಬದುಕಿದ ಗೆಳೆಯ. ಬಾಲಾಜಿ ಇನ್ನಿಲ್ಲ ಎಂದು ನೆನಪಿಸಿಕೊಂಡರೆ ಅಪಾರ ಸಂಕಟವಾಗುತ್ತದೆ’ ಎಂದು ಟಿ.ಎನ್.ಸೀರಾತಾಮ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Live Tv

Leave a Reply

Your email address will not be published.

Back to top button