– ಪುಂಡು ವೇಷ ಮತ್ತು ಬಣ್ಣದ ವೇಷದ ನಡುವೆ ಗಲಾಟೆ
ಉಡುಪಿ: ಮೀಟರ್ ಬಡ್ಡಿ ದಂಧೆ ವಿಚಾರದಲ್ಲಿ ಯಕ್ಷಗಾನ ಕಲಾವಿದನ (Yakshagana Artist) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ನಡೆದಿದೆ.
Advertisement
ನಿತಿನ್ ಆಚಾರ್ಯ ಹಲ್ಲೆಗೊಳಗಾದ ಕಲಾವಿದ. ಮನೆಯಲ್ಲಿ ಕೂಡಿ ಹಾಕಿ ಸಚಿನ್ ಅಮೀನ್ ಎಂಬಾತ ಮನಬಂದಂತೆ ಥಳಿಸಿದ್ದಾನೆ. ಘಟನೆ ಸಂಬಂಧ ಉಡುಪಿಯ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Chikkaballapura | ಗಂಡ-ಹೆಂಡ್ತಿ ನಡುವೆ ಜಗಳ – ಮಲಗಿದ್ದಾಗ ಪತಿಯನ್ನೇ ಕೊಂದಳಾ ಪತ್ನಿ?
Advertisement
Advertisement
ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಉಪಟಳ ಮತ್ತು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದೆ. ಉಡುಪಿಯಲ್ಲಿ ಮೀಟರ್ ಬಡ್ಡಿ ದಂಧೆ ವಿಚಾರದಲ್ಲಿ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಸಸಿ ಹಿತ್ಲು ಯಕ್ಷಗಾನ ಮೇಳದ ಕಲಾವಿದನಾಗಿರುವ ನಿತಿನ್ ಆಚಾರ್ಯಗೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಲಾಗಿದೆ.
Advertisement
ಉಡುಪಿ ಉದ್ಯಾವರದ ಸಚಿನ್ ಅಮೀನ್ ಮತ್ತು ಆತನ ತಂದೆ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ನಿತಿನ್ ಪಡೆದ ಎರಡು ಲಕ್ಷಕ್ಕೆ 25 ಲಕ್ಷ ಬಡ್ಡಿ ಕಟ್ಟಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ. ಹಲ್ಲೆ ಮಾಡಿದ ಸಚಿನ್ ಅಮೀನ್ ಪಾವಂಜೆ ಮೇಳದ ಕಲಾವಿದ. ಸೂಕ್ತ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ವಿಶ್ವಕರ್ಮ ಸಂಘಟನೆಗಳು ಮನವಿ ಮಾಡಿದೆ. ಇದನ್ನೂ ಓದಿ: ಕಗ್ಗಲೀಪುರದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ?